

ಹೊಸದಿಲ್ಲಿ: ಇಂದಿನ ಯುವಜನತೆ ಅತೀ ಹೆಚ್ಚು ಸಮಯ ಕಳೆಯುವುದು ಸಾಮಾಜಿಕ ಜಾಲತಾಣದಲ್ಲಿ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಫೇಸ್ಬುಕ್, ಟ್ವಿಟರ್, ಸ್ನಾಪ್ಚಾಟ್, ವ್ಯಾಟ್ಸಾಪ್ ಪೈಕಿ ಜನರು ಇನ್ಸ್ಟಾಗ್ರಾಮ್ನಲ್ಲಿ ಅಧಿಕ ಸಮಯ ಕಳೆಯುತ್ತಾರೆ. ಕಾರಣ ಉಳಿದ ಸೋಷಿಯಲ್ ಮೀಡಿಯಾ ಆ್ಯಪ್ಗಳಿಗಿಂತ ಇನ್ಸ್ಟಾದಲ್ಲಿ ರೀಲ್ಸ್, ಫಿಲ್ಟರ್ಸ್, ಪೋಸ್ಟ್ ಮಾಡುವ ಪ್ರಕ್ರಿಯೆ ಸೇರಿದಂತೆ ಅತ್ಯಧಿಕ ಹಾಗೂ ಆಕರ್ಷಕ ಸೆಟ್ಟಿಂಗ್ಸ್ಗಳು ಬಳಕೆದಾರರನ್ನು ಸೆಳೆದಿದೆ.
ಮಕ್ಕಳಿಂದ ವಯಸ್ಸಾದ ವೃದ್ಧರು ಕೂಡ ಸ್ಮಾರ್ಟ್ಫೋನ್ ಹಿಡಿದರೆ ನೋಡೋದು ಇನ್ಸ್ಟಾಗ್ರಾಮ್, ತಮ್ಮ ದೈನಂದಿನ ಚಟುವಟಿಕೆಗಳ ಮಧ್ಯೆ ಬಹುಪಾಲು ಸಮಯವನ್ನು ಈ ಆ್ಯಪ್ನಲ್ಲಿ ಕಳೆಯುತ್ತಾರೆ. ಇತರೆ ಆಕರ್ಷಕ ಸಾಮಾಜಿಕ ಜಾಲತಾಣದ ಆ್ಯಪ್ಗಳಿಗೆ ಹೋಲಿಸಿದರೆ, ಯುವಜನತೆ ಅತೀ ಹೆಚ್ಚಾಗಿ ಇನ್ಸ್ಟಾಗ್ರಾಮ್ನಲ್ಲಿ ಸಮಯ ವ್ಯಯಿಸುತ್ತಾರೆ. ಹಾಗಾದ್ರೆ, ನಮ್ಮ ದೇಶದಲ್ಲಿ ಎಷ್ಟರ ಮಟ್ಟಿಗೆ ಜನರು ಇದನ್ನು ಬಳಸುತ್ತಿದ್ದಾರೆ ಎಂಬ ಮಾಹಿತಿ ತಿಳಿಯುವ ಕುತೂಹಲ ನಿಮ್ಮಲ್ಲಿದ್ದೇ ಇರುತ್ತದೆ.
ಇತ್ತೀಚಿಗೆ ಗ್ಲೋಬಲ್ ಇಂಡೆಕ್ಸ್ ಪ್ರಕಟಿಸಿರುವ ಮಾಹಿತಿ ಪ್ರಕಾರ, 2023ರಲ್ಲಿ ಅತೀ ಹೆಚ್ಚಾಗಿ ಇನ್ಸ್ಟಾಗ್ರಾಮ್ ಬಳಕೆ ಮಾಡಿದ ಟಾಪ್ 20 ದೇಶಗಳ ಪಟ್ಟಿಯನ್ನು ಪ್ರಕಟಿಸಿದೆ. ಅದರ ವಿವರ ಹೀಗಿದೆ.
1. ಭಾರತ: 229 ಮಿಲಿಯನ್
2. ಅಮೇರಿಕಾ: 143 ಮಿಲಿಯನ್
3. ಬ್ರೆಜಿಲ್: 113 ಮಿಲಿಯನ್
4. ಇಂಡೋನೇಷ್ಯಾ: 89.1 ಮಿಲಿಯನ್
5. ಟರ್ಕಿ: 48.6 ಮಿಲಿಯನ್
6. ಜಪಾನ್: 45.7 ಮಿಲಿಯನ್
7. ಮೆಕ್ಸಿಕೋ: 36.7 ಮಿಲಿಯನ್
8. ಯುಕೆ: 28.7 ಮಿಲಿಯನ್
9. ಜರ್ಮನಿ: 27.4 ಮಿಲಿಯನ್
10. ಇಟಲಿ: 26.2 ಮಿಲಿಯನ್
11. ಫ್ರಾನ್ಸ್: 23.7 ಮಿಲಿಯನ್
12. ಅರ್ಜೆಂಟೀನಾ: 23.4 ಮಿಲಿಯನ್
13. ಸ್ಪೇನ್: 21.9 ಮಿಲಿಯನ್
14. ದಕ್ಷಿಣ ಕೊರಿಯಾ: 19.2 ಮಿಲಿಯನ್
15. ಕೊಲಂಬಿಯಾ: 17.7 ಮಿಲಿಯನ್
16. ಫಿಲಿಪೈನ್ಸ್: 17.5 ಮಿಲಿಯನ್
17. ಥೈಲ್ಯಾಂಡ್: 17.3 ಮಿಲಿಯನ್
18. ಕೆನಡಾ: 15.9 ಮಿಲಿಯನ್
19. ಈಜಿಪ್ಟ್ : 15.3 ಮಿಲಿಯನ್
20. ಇರಾಕ್ : 14 ಮಿಲಿಯನ್