ನಾಳೆ ನಿರ್ಭಯಾ ಅಪರಾಧಿಗಳಿಗೆ ಗಲ್ಲು?

hang
Published on

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ನಾಲ್ವರು ಅಪರಾಧಿಗಳಿಗೆ ನೇಣು ಬಿಗಿಯಲು ಆಗಮಿಸಿರುವ ಪವನ್ ಜಲ್ಲಾದ್, ಅಪರಾಧಿಗಳ ದೇಹ ತೂಕದ ಪ್ರತಿಕೃತಿಗಳನ್ನು ನೇಣಿಗೇರಿಸುವ ತಾಲೀಮನ್ನು ಬುಧವಾರ ನಡೆಸಿದ್ದಾರೆ.

ವಿಚಾರಣಾ ಕೋರ್ಟ್ ಹೊರಡಿಸಿರುವ ನಾಲ್ಕನೇ ಡೆತ್ ವಾರಂಟ್ ಅನ್ವಯ ಅಪರಾಧಿಗಳಾದ ಮುಕೇಶ್ ಸಿಂಗ್, ಅಕ್ಷಯ್ ಸಿಂಗ್ ಠಾಕೂರ್, ಪವನ್ ಗುಪ್ತಾ ಮತ್ತು ವಿನಯ್ ಶರ್ವರನ್ನು ಶುಕ್ರವಾರ ನಸುಕಿನ 5.30ಕ್ಕೆ ಗಲ್ಲಿಗೇರಿಸಲಾಗುತ್ತದೆ. ಈ ಮಧ್ಯೆ, ಅಕ್ಷಯ್ ಸಲ್ಲಿಸಿರುವ ಎರಡನೇ ಕ್ಷಮಾದಾನದ ಅರ್ಜಿ ಇತ್ಯರ್ಥಕ್ಕೆ ಬಾಕಿ ಇರುವ ಕಾರಣ ಡೆತ್ ವಾರಂಟ್ ರದ್ದು ಮಾಡಬೇಕೆಂದು ನಾಲ್ವರು ಅಪರಾಧಿಗಳು ದೆಹಲಿಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ತಿಹಾರ್ ಜೈಲಿನ ಅಧಿಕಾರಿಗಳಿಗೆ ಕೋರ್ಟ್ ನೋಟಿಸ್ ನೀಡಿದ್ದು, ಗುರುವಾರ ಅರ್ಜಿ ವಿಚಾರಣೆ ನಡೆಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net