ನಾಳೆ ಶಿವಮೊಗ್ಗದಲ್ಲಿ ಸೇವಾಲಾಲ್ ಜಯಂತಿ

sevalal
ಸುದ್ದಿಗೋಷ್ಠಿಯಲ್ಲಿ ಕೆ.ಶಶಿಕುಮಾರ್ ಮಾತನಾಡಿದರು. ರೇಣುಕನಾಯ್ಕ, ಹನು ಜಿ.ನಾಯ್ಕ ಮುಂತಾದವರಿದ್ದರು.
Published on

ಶಿವಮೊಗ್ಗ: ತಾಲೂಕು ಬಂಜಾರ ಸಂಘದಿಂದ ಫೆ.15ರಂದು ಗಾಡಿಕೊಪ್ಪ ತಾಂಡಾದ ಸೇವಾಲಾಲ್ ದೇವಸ್ಥಾನದಲ್ಲಿ ಸೇವಾಲಾಲ್ ಜಯಂತಿ ಏರ್ಪಡಿಸಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಕೆ.ಶಶಿಕುಮಾರ್ ತಿಳಿಸಿದರು.

ಬೆಳಗ್ಗೆ 8ಕ್ಕೆ ದೇವಸ್ಥಾನದ ಆವರಣದಲ್ಲಿ ಕಾಟಿ ಧ್ವಜಾರೋಹಣ ನೆರವೇರಲಿದೆ. 10ಕ್ಕೆ ಶಿಕಾರಿಪುರ ಸಾಲೂರು ಮಠದ ಶ್ರೀ ಸೈನಾ ಭಗತ್ ಅವರ ಸಮ್ಮುಖದಲ್ಲಿ ಭೋಗ್ ಕಾರ್ಯಕ್ರಮ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೆಳಗ್ಗೆ 11ಕ್ಕೆ ಆಲ್ಕೊಳ ವೃತ್ತದಿಂದ ದೇವಸ್ಥಾನದ ಆವರಣದವರೆಗೆ ಮೆರವಣಿಗೆ ನಡೆಯಲಿದ್ದು ಅಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾಜ್ಯ ಗೋರ್‌ಸಿಕ್‌ವಾಡಿ ಸಂಯೋಜಕ ಭೋಜರಾಜ್ ನಾಯ್ಕ ಉಪನ್ಯಾಸ ನೀಡಲಿದ್ದಾರೆ ಎಂದರು.
ಗಾಡಿಕೊಪ್ಪ ತಾಂಡಾದ ಹನುಮಂತ ನಾಯ್ಕ, ಗೋಪ್ಯಾನಾಯ್ಕಾ, ಕೃಷ್ಣಾನಾಯ್ಕಾ ಹಾಗೂ ತಾಲೂಕು ಮಹಿಳಾ ಬಂಜಾರ ಸಂಘದ ಅಧ್ಯಕ್ಷೆ ರಂಜಿತಾ ಉಪಸ್ಥಿತರಿರುವರು. ಸಂಘದ ಅಧ್ಯಕ್ಷ ನಾನ್ಯಾನಾಯ್ಕಾ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು. ಪ್ರಮುಖರಾದ ಹನು ಜಿ.ನಾಯ್ಕ, ರೇಣುಕನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net