ತಿಂಗಳ ಹಿಂದೆ ಗಗನಕ್ಕೇರಿದ್ದ ಟೊಮ್ಯಾಟೊ ಬೆಲೆ ಇದೀಗ ಪಾತಾಳಕ್ಕೆ ಕುಸಿತ

tmix
Published on

ಪುಣೆ: ಮಹಾರಾಷ್ಟ್ರದ ಟೊಮ್ಯಾಟೊ ಬೆಳೆ ರೈತರು ಸಂಕಷ್ಟ ಅನುಭವಿಸಿದ್ದಾರೆ. ತಿಂಗಳ ಹಿಂದೆ ಪತೀ ಕೆಜಿಗೆ 200 ರೂಪಾಯಿ ಇದ್ದ ಟೊಮ್ಯಾಟೊ ಬೆಲೆ ಇದೀಗ 3-5 ರೂಪಾಯಿವರೆಗೆ ಕುಸಿತ ಕಂಡಿದೆ. ಟೊಮ್ಯಾಟೊ ಬೆಳೆದ ಪ್ರತಿಯೊಬ್ಬ ರೈತರೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಅಂತಲೇ ಹೇಳಬಹುದು.


ಟೊಮ್ಯಾಟೊ ಹೆಚ್ಚಾಗಿ ಬೆಳೆದಿರುವುದು ಈ ಸಂಕಷ್ಟಕ್ಕೆ ಕಾರಣ ಅಂತಲೇ ಹೇಳಬಹುದು. ಇಷ್ಟು ದೊಡ್ಡ ಮಟ್ಟಿನ ಮಾರುಕಟ್ಟೆ ವ್ಯತ್ಯಯವನ್ನು ತಡೆಯಲು ಟೊಮ್ಯಾಟೊ ಮತ್ತು ಈರುಳ್ಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸುವುದೊಂದೇ ದಾರಿ ಅಂತಾರೆ ನಾಸಿಕ್​ ಕೃಷಿ ಹೋರಾಟಗಾರ ಅಚಿನ್​ ಹೋಳ್ಕರ್​​.


ಅತಿದೊಡ್ಡ ಸಗಟು ಮಾರುಕಟ್ಟೆ ಎನಿಸಿದ ಪಿಂಪಲ್​ಗಾಂವ್​​ ಎಪಿಎಮ್​​​ಸಿಯಲ್ಲಿ 2 ಲಕ್ಷ ಬುಟ್ಟಿ ಟೊಮ್ಯಾಟೊ ಹರಾಜು ಆಗುತ್ತಿದೆ. ನಾಸಿಕ್​​​ನ ಪ್ರಮುಖ ಮೂರು ಸಗಟು ಮಂಡಿಗಳಾದ ಪಿಂಪಲ್​ಗಾಂವ್​, ನಾಸಿಕ್​​ ಮತ್ತು ಲಸಲ್ಯಾಂಕ್ನಲ್ಲಿ ಆರು ವಾರದ ಹಿಂದೆ 20 ಕೆಜಿ ಬುಟ್ಟಿಗೆ 2 ಸಾವಿರ ರೂ. ಇದ್ದ ಬೆಲೆ ಇದೀಗ 90 ರೂಪಾಯಿಗೆ ಇಳಿದಿದೆ. ಪುಣೆಯಲ್ಲಿ ಪ್ರತೀ ಕೆಜಿಗೆ 5 ರೂ. ಇಳಿದಿದೆ.


ಇನ್ನು ಇಲ್ಲಿಂದ ಉತ್ಪನ್ನಗಳನ್ನು ಸಾಗಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಬೇರೆ ರಾಜ್ಯಗಳ ವ್ಯಾಪಾರಿಗಳು ಇಲ್ಲಿನ ಟೊಮ್ಯಾಟೊ ತಳಿಯನ್ನು ಖರೀದಿಸಲು ಉತ್ಸುಕರಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net