

Huge Project: ದಕ್ಷಿಣ ಭಾರತ ಚಿತ್ರರಂಣಗದ ಮೊಸ್ಟ್ ಬ್ಯೂಟಿಫುಲ್ ಯಂಗ್ ಆ್ಯಕ್ಟರ್ಗಳಾದ ಸೂಪರ್ಸ್ಟಾರ್ ಹಾಗೂ ಸ್ಟೈಲಿಸ್ ಸ್ಟಾರ್ ಅಲ್ಲು ಅರ್ಜುನ್ ಇದೀಗ ಹೊಸ ಬೃಹತ್ ಯೋಜನೆಯೊಂದಕ್ಕೆ ಕೈ ಹಾಕಿದ್ದಾರೆ.
ಹೌದು, ಈ ಯೋಜನೆ ಸಿನಿಮಾ ಕ್ಷೇತ್ರದಲ್ಲಿಯದರೂ ಸಿನಿಮಾ ಅಲ್ಲ. ಈಗಾಗಲೇ ಮಲ್ಟಿಪ್ಲೆಕ್ಸ್ ನಿರ್ಮಾಣ ವ್ಯವಹಾರದಲ್ಲಿ ಅಲ್ಲು ಹಾಗೂ ಮಹೇಶ್ ಪ್ರವೇಶಿಸಿದ್ದಾರೆ. ಏಷ್ಯನ್ ಗ್ರೂಪ್ಸ್‌ನ ಪಾಲುದಾರಿಕೆಯೊಂದಿಗೆ ಅವರು ಈ ಕ್ಷೇತ್ರದಲ್ಲಿ ಉನ್ನತಿಯಲ್ಲಿದ್ದಾರೆ. ಮಹೇಶ್ ಬಾಬು ಹೈದರಾಬಾದ್‌ನಲ್ಲಿ ಅತ್ಯಂತ ಐಷಾರಾಮಿ ಮಲ್ಟಿಪ್ಲೆಕ್ಸ್ (AMB) ಅನ್ನು ನಿರ್ಮಿಸಿದ್ದಾರೆ. ಇತ್ತ ಅಲ್ಲು ಅರ್ಜುನ್ ಇತ್ತೀಚೆಗೆ (AAA) ಹೆಸರಿನಲ್ಲಿ ಈ ವ್ಯವಹಾರ ಕ್ಷೇತ್ರವನ್ನು ಪ್ರವೇಶಿಸಿದರು. ಆದಾಗ್ಯೂ, ಈಗ ಇಬ್ಬರೂ ತಮ್ಮ ವ್ಯವಹಾರವನ್ನು ಇತರ ರಾಜ್ಯಗಳಲ್ಲಿಯೂ ವಿಸ್ತರಿಸಲು ಯೋಜಿಸುತ್ತಿದ್ದಾರೆಂದು ವರದಿಯಾಗಿದೆ.
ಈ ಕ್ಷೇತ್ರದಲ್ಲಿ ಇದಾಗಲೇ ಹಲವಾರು ಹೀರೋಗಳು ಪ್ರವೇಶ ಮಾಡಿದ್ದು, ರವಿತೇಜ ಹಾಗೂ ವಿಜಯ್ದೇವರಕೊಂಡ ಯಶಸ್ಸು ಪಡೆದಿದ್ದಾರೆ. ಆದರೆ,ಇವರುಗಳು ಹೈದರಾಬಾದ್ಗೆ ಮಾತ್ರ ಸೀಮಿತರಾಗಿದ್ದಾರೆ. ಮಹೇಶ್ ಬಾಬು ಇದಾಗಲೇ ಹೈದರಾಬಾದ್‌ನಲ್ಲಿ ಮಲ್ಟಿಪ್ಲೆಕ್ಸ್ ಇದ್ದು, ಬೆಂಗಳೂರಿನಲ್ಲಿ ಕೂಡ ಐಷಾರಾಮಿ ಮಲ್ಟಿಪ್ಲೆಕ್ಸ್ ಇದೆ. ಇವರು ಚೈನ್ನೈನಲ್ಲಿ ಕೂಡ ಆರಂಭಿಸಲಿದ್ದಾರೆ ಎಂದು ವರದಿಯಾಗಿದೆ. ಮಹೇಶ್ ಏಷ್ಯನ್ ಸಿನಿಮಾಸ್ ಸಹಯೋಗದೊಂದಿಗೆ ಅಲ್ಲಿ ಒಂದು ಬೃಹತ್ ಥಿಯೇಟರ್ ನಿರ್ಮಿಸಲು ಯೋಜಿಸುತ್ತಿದ್ದಾರೆ. ಏಷ್ಯನ್ ಸಿನಿಮಾಸ್ ಮುಖ್ಯಸ್ಥ ಸುನಿಲ್ ನಾರಂಗ್ ಈ ಬಗ್ಗೆ ತಮ್ಮ ಆಪ್ತ ಸ್ನೇಹಿತರಿಗೆ ತಿಳಿಸಿದ್ದಾರೆ.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಈಗಾಗಲೇ ಹೈದರಾಬಾದ್‌ನ ಅಮೀರ್‌ಪೇಟೆ (ಎಎಎ) ಸಿನಿಮಾಸ್‌ನಲ್ಲಿ ಮಲ್ಟಿಪ್ಲೆಕ್ಸ್ ನಿರ್ಮಿಸಿದ್ದಾರೆ ಎಂದು ತಿಳಿದುಬಂದಿದೆ. ಅವರು ಏಷ್ಯನ್ ಸಿನಿಮಾಸ್‌ನ ಸಹಭಾಗಿತ್ವದಲ್ಲಿ ಈ ವ್ಯವಹಾರವನ್ನು ಸಹ ಪ್ರವೇಶಿಸಿದ್ದಾರೆ. ಆದಾಗ್ಯೂ, ಈಗ ಅವರು ವೈಜಾಗ್‌ನಲ್ಲಿ ಎಎಎ ಮಲ್ಟಿಪ್ಲೆಕ್ಸ್ ಅನ್ನು ಯೋಜಿಸುತ್ತಿದ್ದಾರೆಂದು ತೋರುತ್ತದೆ. ಹೈದರಾಬಾದ್‌ನಲ್ಲಿರುವಂತೆಯೇ ವೈಜಾಗ್‌ನಲ್ಲಿ ಶೀಘ್ರದಲ್ಲೇ ತೆರೆಯಲಿರುವ ಇನಾರ್ಬಿಟ್ ಮಾಲ್‌ನಲ್ಲಿ ಮಲ್ಟಿಪ್ಲೆಕ್ಸ್ ನಿರ್ಮಿಸಲಾಗುತ್ತಿದೆ. ಸುನಿಲ್ ನಾರಂಗ್ ಕೂಡ ಇದೇ ಮಾತನ್ನು ಹೇಳಿದ್ದಾರೆ. ಶೀಘ್ರದಲ್ಲೇ ಅಧಿಕೃತ ಘೋಷಣೆ ಬರಬಹುದು ಎಂದು ತೋರುತ್ತದೆ.(ಏಜೆನ್ಸೀಸ್)