Mahesh Babu ನ್ಯೂಲುಕ್​ ರಿವೀಲ್​​​; ಪ್ರಿನ್ಸ್​​ ನೋಡಿ ಫ್ಯಾನ್ಸ್​ ಹೇಳಿದ್ದೀಗೆ..

WhatsApp Image 2024-09-23 at 5.18.34 PM
Published on

ಹೈದರಾಬಾದ್​​: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗಿ ಜನಜೀವನ ಅಸ್ತವ್ಯಸ್ತವಾಗಿರುವುದು ಗೊತ್ತೆ ಇದೆ. ಸಂತ್ರಸ್ತರಿಗೆ ನೆರವಾಗಲು ಸೆಲಿಬ್ರಿಟಿಗಳು ದೇಣಿಗೆ ನೀಡುತ್ತಿದ್ದಾರೆ. ಟಾಲಿವುಡ್​ ಪ್ರಿನ್ಸ್​ ಮಹೇಶ್​ಬಾಬು (Mahesh Babu ) ಎರಡೂ ರಾಜ್ಯಗಳಿಗೆ ತಲಾ 50 ಲಕ್ಷ ರೂಪಾಯಿ ನೀಡುವುದಾಗಿ ತಿಳಿದ್ದರು.

ನುಡಿದ ಮಾತಿನಂತೆಯೇ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿ, ಸಂತ್ರಸ್ತರ ಪರಿಹಾರಕ್ಕಾಗಿ ಘೋಷಿಸಿದ್ದ ಹಣವನ್ನು ಚೆಕ್​​ ಮೂಲಕ ಹಸ್ತಾಂತರಿಸಿದ್ದಾರೆ. ತಿಳಿಸಿದ್ದಕ್ಕಿಂತ 10 ಲಕ್ಷ ರೂಪಾಯಿಯನ್ನು ಹೆಚ್ಚಾಗಿ ದೇಣಿಗೆ ನೀಡಿದ್ದಾರೆ. ಈ ವೇಳೆ ತೆಗೆದ ಫೋಟೋವನ್ನು ಸಿಎಂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಒಂದು ಖುಷಿ ವಿಷಯವಾದರೂ ಅಭಿಮಾನಿಗಳನ್ನು ಆಕರ್ಷಿಸಿದ ಅಸಲಿ ಸಂಗತಿ ಬೇರೆಯೇ ಇದೆ. ಹೌದು ಸಿಎಂ ಹಂಚಿಕೊಂಡಿರುವ ಫೋಟೋದಲ್ಲಿ ಸೂಪರ್​ಸ್ಟಾರ್ ಮಹೇಶ್​ ಬಾಬು ಅವರ ಹೊಸ ಲುಕ್​​ ಅನ್ನು ಕಾಣಬಹುದಾಗಿದೆ. ಟಾಲಿವುಡ್​ ಅಂಗಳದಲ್ಲಿ ಸದ್ಯ ಇದು ಚರ್ಚೆಯ ಹಾಟ್​ ಟಾಪಿಕ್​​ ಆಗಿದೆ.

ನಿರ್ದೇಶಕ ರಾಜಮೌಳಿ ಜತೆಗಿನ ಸಿನಿಮಾ 'SSMB 29'ಗಾಗಿ ಮಹೇಶ್​ ಬಾಬು ಈ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಜಮೌಳಿ ಅವರ ಚಿತ್ರದಲ್ಲಿ ಮಹೇಶ್ ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಮಹೇಶ್​​​ಗಾಗಿ ಜಕಣ್ಣ ತಂಡ ಎಂಟು ಲುಕ್ ಸಿದ್ಧಪಡಿಸಿದೆ ಎನ್ನಲಾಗಿದೆ.

" class="alignnone wp-image-2365774 size-full" height="400" src="https://www.vijayavani.net/wp-content/uploads/2024/09/Untitled-design-2024-09-23T171200.753.webp" width="600"/>

ಇತ್ತೀಚಿನ ದಿನಗಳಲ್ಲಿ ಮಹೇಶ್ ತಮ್ಮ ಹೊಸ ಲುಕ್ ಹೊರಗೆ ಬರದಂತೆ ಬಹಳ ಜಾಗರೂಕರಾಗಿದ್ದರು. ಈವೆಂಟ್ ಗಳಿಗೆ, ರಜೆಗಳಿಗೆ ಹೋದಾಗಲೂ ತನ್ನ ಲುಕ್ ರಿವೀಲ್ ಆಗದಂತೆ ನೋಡಿಕೊಳ್ಳುತ್ತಿದ್ದರು. ಈಗ ಸೂಪರ್​​​ಸ್ಟಾರ್​​ನ ಕಂಪ್ಲೀಟ್ ಲುಕ್ ರಿವೀಲ್​ ಆಗಿದೆ.

ಅಮೆಜಾನ್ ಕಾಡುಗಳ ಹಿನ್ನೆಲೆಯಲ್ಲಿ ನಡೆಯುವ ಈ ಕಥೆಯಲ್ಲಿ ಹಲವು ವಿದೇಶಿ ನಟರು ಕಾಣಿಸಿಕೊಳ್ಳಲಿದ್ದಾರೆ. ಭಾರತೀಯ ಭಾಷೆಗಳಲ್ಲದೆ ವಿದೇಶಿ ಭಾಷೆಗಳಿಗೂ ಸಿನಿಮಾ ಡಬ್ಬಿಂಗ್​​ ಆಗಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ರಿವೀಲ್​ ಆಗಿರುವ ಮಹೇಶ್​ಬಾಬು ನ್ಯೂಲುಕ್ ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇದರೊಂದಿಗೆ ಸಿನಿಮಾದ ಅದ್ಧೂರಿ ಗೆಲುವು ಖಚಿತ, ಅಣ್ಣಾ ಹಾಲಿವುಡ್​ ಮೆಟೀರಿಯಲ್​ ಎಂದು ಕಾಮೆಂಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net