

Tollywood Release: ಹೊಸ ವರ್ಷಕ್ಕೆ ಕಾಲಿಟ್ಟಿರುವ ಭಾರತೀಯ ಚಿತ್ರೋದ್ಯಮ ತಮ್ಮ ಸಿನಿಪ್ರಿಯರಿಗೆ ಹೆಚ್ಚು ಮನರಂಜನೆ ಕೊಡಲು ದಿಟ್ಟ ನಿರ್ಧಾರ ಕೈಗೊಂಡಿದೆ. ಇದಕ್ಕೆ ಸಾಕ್ಷಿ ಹಲವಾರು ಚಿತ್ರರಂಗಗಳ ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್. ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಮತ್ತು ಬಾಲಿವುಡ್ನ ಸ್ಟಾರ್ ನಟರು ಸೇರಿದಂತೆ ಹೊಸಬರ ಹಲವು ನಿರೀಕ್ಷಿತ ಚಿತ್ರಗಳು ಈ ವರ್ಷದ ಮೊದಲಾರ್ಧದಲ್ಲಿ ತೆರೆಕಾಣಲು ಎದುರುನೋಡುತ್ತಿವೆ. ಕಳೆದ ವರ್ಷ ಉತ್ತಮ ಆದಾಯ ನೋಡದ ಸಿನಿ ಇಂಡಸ್ಟ್ರಿಗಳು 2025ರಲ್ಲಿ ಅತ್ಯುತ್ತಮ ಲಾಭ ಗಳಿಸುವತ್ತ ದಾಪುಗಾಲಿಟ್ಟಿದೆ. ಈ ಸಾಲಿನಲ್ಲಿ ತೆಲುಗು ಚಿತ್ರರಂಗ ಒಂದು ಹೆಜ್ಜೆ ಮುಂದೋಗಿದೆ ಎಂದರೆ ಖಂಡಿತ ತಪ್ಪಾಗಲಾರದು. ಅದಕ್ಕೆ ಫೆಬ್ರವರಿ ತಿಂಗಳಲ್ಲಿ ರಿಲೀಸ್ ಅಗಲಿರುವ 8 ಸಿನಿಮಾಗಳೇ ಸಾಕ್ಷಿ.
ಇತ್ತೀಚೆಗಷ್ಟೇ ಭರ್ಜರಿ ಓಪನಿಂಗ್ ಪಡೆದ ತೆಲುಗು ಹಿರಿಯ ನಟ ಬಾಲಯ್ಯ ಅಭಿನಯದ 'ಡಾಕು ಮಹಾರಾಜ' ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಕಂಗೊಳಿಸುತ್ತಿವೆ. ಆ್ಯಕ್ಷನ್, ಮಾಸ್ಗೆ ಕಿಂಗ್ ಆಗಿ ಮಿಂಚುತ್ತಿರುವ ನಟ ಬಾಲಯ್ಯ, ಡಾಕು ಮಹಾರಾಜ್ ಮೂಲಕ ಬಾಕ್ಸ್ ಆಫೀಸ್ನಲ್ಲಿ ಅತ್ಯುತ್ತಮ ಗಳಿಕೆ ನೋಡುವ ನಿರೀಕ್ಷೆಯಲ್ಲಿದ್ದಾರೆ. ಥಿಯೇಟರ್ಗಳತ್ತ ಮುಖ ಮಾಡಿರುವ ಸಿನಿರಸಿಕರು, ಬಾಲಯ್ಯ ನಟನೆಗೆ ಫಿದಾ ಆಗಿದ್ದಾರೆ. ಇದೊಂದು ಸಿನಿಮಾ ಮೂಲಕ ಟಾಲಿವುಡ್ಗೆ ಹೊಸ ವರ್ಷದಲ್ಲಿ ಹೊಸ ಭರವಸೆ ಸಿಕ್ಕಂತಾಗಿದೆ. ಕಳೆದ ವರ್ಷ 'ಪುಷ್ಪ 2' ಗೆಲುವಿನ ಅಲೆಯಲ್ಲಿದ್ದ ಟಾಲಿವುಡ್ಗೆ ಡಾಕು ಮಹಾರಾಜ್ ಹೊಸದೊಂದು ಆಯಾಮವನ್ನೇ ಕೊಟ್ಟಿದೆ. ಬರೋಬ್ಬರಿ 8 ಸಿನಿಮಾಗಳನ್ನು ಫೆಬ್ರವರಿಯಲ್ಲಿ ತೆರೆಗೆ ತರಲು ನಿರ್ಧರಿಸಿರುವ ಟಾಲಿವುಡ್, ತೆಲುಗು ಚಿತ್ರರಸಿಕರಿಗೆ ಮನರಂಜನೆಯ ಹಬ್ಬದೂಟ ಕೊಡಲು ಮುಂದಾಗಿದೆ.
1. ಪಟ್ಟುದಲ: ಫೆಬ್ರವರಿ 06, 2025
2. ತಾಂಡೇಲ್: ಫೆಬ್ರವರಿ 07, 2025
3. ಲೈಲಾ: ಫೆಬ್ರವರಿ 14, 2025
4. ದಿಲ್ರುಬಾ: ಫೆಬ್ರವರಿ 14, 2025
5. ಬ್ರಹ್ಮ ಆನಂದಂ: ಫೆಬ್ರವರಿ 14, 2025
6. ಮಜಾಕಾ: ಫೆಬ್ರವರಿ 21, 2025
7. ಸಬ್ದಮ್: ಫೆಬ್ರವರಿ 28, 2025
8. ರಾಬಿನ್ಹುಡ್ : ಫೆಬ್ರವರಿ 28, 2025 ,(ಏಜೆನ್ಸೀಸ್).