ವರುಣನ ಆರ್ಭಟಕ್ಕೆ ಟೋಲ್ ಧ್ವಂಸ, ಕರೊನಾ ವಾರಿಯರ್ಸ್​ ಬಚಾವ್​!

rain-toll
Published on

ಕೊಲ್ಹಾಪುರ: ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದಲ್ಲಿ ಗುರುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಜಿಲ್ಲೆಯ ಕಡೆಯ ಕೀಣೆ ಟೋಲ್ ನಾಕಾ ಸಂಪೂರ್ಣ ಧ್ವಂಸವಾಗಿದೆ. ಟೋಲ್​ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಕರೊನಾ ವಾರಿಯರ್ಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಳೆ ಗಾಳಿಯ ರಭಸಕ್ಕೆ ಟೋಲ್ ನಾಕಾ, ಶೀಟ್​ಗಳು ತಗರೆಲೆಯಂ​ತೆ ಹಾರಿವೆ. ಅಲ್ಲಿದ್ದ ಕಂಪ್ಯೂಟರ್ ಪರಿಕರ ಹಾನಿಯಾದವು. ಪರಿಣಾಮ ತಾಂತ್ರಿಕ ಸಮಸ್ಯೆ ಉಂಟಾಗಿ ಆನ್​ಲೈನ್ ಸೇವೆ ಸ್ಥಗಿತಗೊಂಡಿತ್ತು. ಸೇವಾ ಸಿಂಧು ಆನ್​ಲೈನ್ ಪಾಸ್ ಹಿಡಿದು ಬಂದವರು ಕೀಣೆ ಟೋಲ್ ಬಳಿ ಕೆಲ ಸಮಯ ಪರದಾಡುವಂತಾಯಿತು. 

ಮಳೆ ಆರ್ಭಟಕ್ಕೆ ಬೆಚ್ಚಿದ ಟೋಲ್​ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಕರೊನಾ ವಾರಿಯರ್ಸ್ ಟೆಂಟ್ ಬಿಟ್ಟು ಓಡಿ ಹೋಗಿ ಜೀವ ಉಳಿಸಿಕೊಂಡರು. ಕರ್ನಾಟಕ ಗಡಿ ಭಾಗದಲ್ಲಿರುವ ಮಹಾರಾಷ್ಟ್ರದ ಕಟ್ಟ ಕಡೆಯ ಟೋಲ್ ಇದಾಗಿದ್ದು, ಪಾಸ್​ ಹಿಡಿದು ರಾಜ್ಯ ಪ್ರವೇಶಿಸಲು ಬಂದ ಜನರು ಕೆಲ ಗಂಟೆಗಳ ಕಾಲ ಅಲ್ಲೇ ಲಾಕ್​ ಆಗಿದ್ದರು. ಗಾಳಿ ಸಹಿತ ಮಳೆ ಸೃಷ್ಟಿಸಿದ ಅವಾಂತರವನ್ನು ಟೋಲ್​ ಬಳಿ ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು ಮೊಬೈಲ್​ನಲ್ಲಿ ಸೆರೆಹಿಡಿದ ವಿಡಿಯೋ ವೈರಲ್ ಆಗಿದೆ.

ಇದನ್ನೂ ನೋಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net