ಲಾಕ್​ಡೌನ್ ಹೊರತಾಗಿಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಟೋಲ್ ಸಂಗ್ರಹ ಶುರು?

toll nitk
Published on

ನವದೆಹಲಿ: ಲಾಕ್​ಡೌನ್ ಹೊರತಾಗಿಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​ಎಚ್​ಎಐ) ಏ.20ರಿಂದ ಟೋಲ್ ಸಂಗ್ರಹ ಮತ್ತೆ ಆರಂಭಿಸುವ ಸಾಧ್ಯತೆ ಇದೆ.

ಏ.20ರಿಂದ ಕೆಲವು ನಿರ್ಬಂಧಗಳು ಸಡಿಲಗೊಳ್ಳುವ ನಿರೀಕ್ಷೆ ಇರುವುದರಿಂದ ಟೋಲ್ ಸಂಗ್ರಹ ಆರಂಭಿಸುವ ಬಗ್ಗೆ ಸಾರಿಗೆ ಸಚಿವಾಲಯ ಮತ್ತು ಎನ್​ಎಚ್​ಎಐ ಮಧ್ಯೆ ಆಂತರಿಕ ಸಂವಹನ ನಡೆದಿದೆ ಎನ್ನಲಾಗಿದೆ. ಟೋಲ್ ಸಂಗ್ರಹದಿಂದ ಸರ್ಕಾರದ ಬೊಕ್ಕಸಕ್ಕೂ ಹಣ ಹರಿದುಬರುತ್ತದೆ. ಜತೆಗೆ ಹೆದ್ದಾರಿ ಅಭಿವೃದ್ಧಿ ಕಾರ್ಯಗಳಿಗೆ ಬಜೆಟ್ ನೆರವು ದೊರೆಯುತ್ತದೆ ಎಂದು ಎನ್​ಎಚ್​ಎಐ ಅಧ್ಯಕ್ಷ ಸಾರಿಗೆ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆಂದು ಮೂಲಗಳು ಹೇಳಿವೆ.

ಮೇ 4ರಿಂದ ವಿಮಾನಯಾನ?

ನವದೆಹಲಿ: ಕೆಲ ದೇಶೀಯ ಮಾರ್ಗಗಳಲ್ಲಿ ಮೇ 4 ರಿಂದ ವಿಮಾನ ಪ್ರಯಾಣ ಟಿಕೆಟ್ ಬುಕಿಂಗ್ ಆರಂಭಿಸಿರುವುದಾಗಿ ಏರ್ ಇಂಡಿಯಾ ಶನಿವಾರ ಪ್ರಕಟಿಸಿದೆ. ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಜೂ.4ರಿಂದ ಟಿಕೆಟ್ ಬುಕಿಂಗ್ ಸೇವೆ ಲಭ್ಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net