ಪಿತೃತ್ವ ರಜೆ ಬದಲು ವರ್ಗಾವಣೆಗೆ ಮುಂದಾದ ಬಾಸ್​; ವರ್ಷಕ್ಕೆ 7.8 ಕೋಟಿ ರೂ. ಸಂಬಳದ ಉದ್ಯೋಗ ಸಂಬಳದ ಉದ್ಯೋಗಕ್ಕೆ ಗುಡ್​ ಬೈ ಹೇಳಿದ Lawyer

Job Resignation
Published on

ನವದೆಹಲಿ: ನಾವು ಎಷ್ಟೇ ಒತ್ತಡದ ಪರಿಸ್ಥಿತಿಯಲ್ಲಿದ್ದರೂ ಕುಟುಂಬದ ಜೊತೆ ಕಾಲ ಕಳೆಯಲು ಸಮಯವನ್ನು ಮೀಸಲಿಟ್ಟಿರುತ್ತೇವೆ. ನಾವು ನೋಡಿದಂತೆ ಅನೇಕರು ಕೆಲಸದ ಜೊತೆಗೆ ತಮ್ಮ ಕುಟುಂಬದ ಜೊತೆಗೆ ಹೆಚ್ಚಿನ ವೈಯಕ್ತಿಕ ಸಮಯವನ್ನು ಕಳೆಯಲು ಬಯಸುತ್ತಾರೆ. ಕೆಲವೊಮ್ಮೆ ಈ ವಿಚಾರಕ್ಕಾಗಿ ಅನೇಕರು ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿರುವುದನ್ನು ಸಹ ನಾವು ನೋಡಿದ್ದೇವೆ. ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ವಕೀಲರೊಬ್ಬರು (Lawyer) ವರ್ಷಕ್ಕೆ 7.8 ಕೋಟಿ ರೂ. ಸಂಬಳ ಬರುತ್ತಿದ್ದ ಕೆಲಸವನ್ನೇ ತ್ಯಜಿಸಿ ಸುದ್ದಿಯಾಗಿದ್ದಾರೆ.

ಅಮೆರಿಕದ ಪ್ರತಿಷ್ಠಿತ ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಪತ್ನಿ 8 ತಿಂಗಳ ಗರ್ಭಿಣಿ ಆಗಿರುವ ಕಾರಣ ತಮ್ಮನ್ನು ವರ್ಗಾವಣೆ ಮಾಡದಂತೆ ಮತ್ತು ಪಿತೃತ್ವ ರಜೆ ಕೊಡುವಂತೆ ಕೇಳಿದ್ದರು. ಆದರೆ, ಇದಕ್ಕೆ ಬಾಸ್ ಒಪ್ಪದ ಕಾರಣ ಸಿಟ್ಟಿಗೆದ್ದ ವಕೀಲ (Lawyer) ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ ಕಂಪನಿಯ ನಿರ್ಧಾರಕ್ಕೆ ಸೆಡ್ಡು ಹೊಡೆದಿದ್ದಾರೆ.

ವಕೀಲರ (Lawyer) ಈ ನಿರ್ಧಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದು, ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸುವ ವಿಷಯಕ್ಕೆ ಬಂದಾಗ ಪ್ರತಿಯೊಬ್ಬರೂ ತಮ್ಮ ಜೀವನದ ಒಂದು ಹಂತದಲ್ಲಿ ಇಂತಹ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ವಿವರಿಸಿದ್ದಾರೆ.

ವಾರ್ಷಿಕವಾಗಿ ಸುಮಾರು $900,000 ಅಂದರೆ 7,87,23,495.00 ರೂ. ಗಳಿಸುತ್ತಿದ್ದ ವಕೀಲರೊಬ್ಬರು ತಮ್ಮ ಬಾಸ್‌ನ ನಡೆಯಿಂದ ಕೆಲಸವನ್ನು ತೊರೆಯಬೇಕಾಯಿತು. ಈ ಲಾಯರ್ (Lawyer) ಕಳೆದ ಐದು ವರ್ಷಗಳಿಂದ ಪ್ರತಿಷ್ಠಿತ ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸದ ವಿಷಯದ ಬಗ್ಗೆ ತುಂಬಾ ನಿಷ್ಠಾವಂತರಾಗಿದ್ದ ಇವರು ವಾರಕ್ಕೆ ಸುಮಾರು 80 ಗಂಟೆಗಳ ಕಾಲ ಸಂಸ್ಥೆಗಾಗಿ ದುಡಿಯುತ್ತಿದ್ದರು. ಆದರೆ, ಇವರ ಪತ್ನಿ ಎಂಟು ತಿಂಗಳ ಗರ್ಭಿಣಿಯಾಗಿದ್ದಾಗಲೇ, ಇವರ ಬಾಸ್ ಇವರನ್ನು ಬೇರೆಡೆ ವರ್ಗಾವಣೆ ಮಾಡಲು ಮುಂದಾಗಿದ್ದರು.

ಹೆರಿಗೆಯ ಸಮಯದಲ್ಲಿ ತನ್ನ ಹೆಂಡತಿಯೊಂದಿಗೆ ಇರಬೇಕೆಂದು ಬಯಸಿದ ಲಾಯರ್‌ (Lawyer) ವರ್ಗಾವಣೆ ಮಾಡ್ಬೇಡಿ, ತಮಗೆ ಒಂದಷ್ಟು ದಿನ ಪಿತೃತ್ವ ರಜೆ ನೀಡುವಂತೆ ವಿನಂತಿಸಿದರು. ಆದರೆ ಬಾಸ್‌ ಅವರ ಕೋರಿಕೆಯನ್ನು ತಿರಸ್ಕರಿಸಿದ್ದು, ಆ ತಕ್ಷಣವೇ ಲಾಯರ್‌ ಕೆಲಸ ತ್ಯಜಿಸಿದ್ದಾರೆ. ಸದ್ಯ ಈ ಪೋಸ್ಟ್‌ ಸಖತ್‌ ವೈರಲ್ ಆಗುತ್ತಿದ್ದು, ಈವರೆಗೆ 495.4ಕೆ ವೀವ್ಸ್ ಪಡೆದುಕೊಂಡಿದೆ. ಅನೇಕರು ವಕೀಲರ ನಡೆಯನ್ನು ಮೆಚ್ಚಿ ಕಮೆಂಟ್ ಹಾಕಿದ್ದು, ದುಡ್ಡಿಗಿಂತ ಕುಟುಂಬವೇ ಮುಖ್ಯವೆಂಬುದನ್ನು ಇವರು ನಿರೂಪಿಸಿದ್ಧಾರೆಂದು ವಕೀಲರನ್ನು ಹಾಡಿ ಹೊಗಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net