

ಬೆಂಗಳೂರು: ನಗರದಲ್ಲಿರುವ ಎಲ್ಲ ಶೌಚಗೃಹಗಳು ಲಾಕ್ಡೌನ್ ವೇಳೆಯಲ್ಲೂ ಕಾರ್ಯ ನಿರ್ವಹಿಸುವಂತೆ ಬಿಬಿಎಂಪಿ ಸೂಚನೆ ನೀಡಿದೆ. ಆದರೆ, ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕರೊನಾದಿಂದ ರಕ್ಷಣೆಗೆ ಸುರಕ್ಷತಾ ಸಾಮಗ್ರಿ ಕೊಡದೆ ನಿರ್ಲಕ್ಷ್ಯ ವಹಿಸಿದೆ.
ನಗರದಲ್ಲಿ ಒಟ್ಟು 438 ಸಾರ್ವಜನಿಕ ಶೌಚಗೃಹಗಳಿದ್ದು, ಲಾಕ್ಡೌನ್ ಆರಂಭವಾದಾಗಿನಿಂದ ಬೆಳಗ್ಗೆ 5ರಿಂದ ರಾತ್ರಿ 10 ಗಂಟೆವರೆಗೂ ತೆರೆದಿರುತ್ತವೆ. ಕೂಲಿಕಾರ್ವಿುಕರು, ನಿರ್ಗತಿಕರು, ನಿರಾಶ್ರಿತರು ಇದರ ಉಪಯೋಗ ಪಡೆಯುತ್ತಿದ್ದಾರೆ. ಆದರೆ, ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಚ್ಛತಾ ಸಿಬ್ಬಂದಿ ಭೀತಿಯಲ್ಲೇ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ವಣವಾಗಿದೆ.
ತ್ರಿಶಂಕು ಸ್ಥಿತಿಯಲ್ಲಿ ಜೀವನ: ಬೆಂಗಳೂರು ಸೇರಿ ರಾಜ್ಯದ ಬಹುತೇಕ ನಗರ- ಪಟ್ಟಣಗಳ ಶೌಚಗೃಹಗಳ ನಿರ್ವಹಣೆಗೆ ಶೇ. 80 ಬಿಹಾರದ ವಲಸಿಗರನ್ನು ನೇಮಕ ಮಾಡಲಾಗಿದೆ. ಇವರು ಗುತ್ತಿಗೆದಾರರಿಗೆ ಇಂತಿಷ್ಟು ಹಣ ಕೊಟ್ಟು, ಬಂದ ಹೆಚ್ಚುವರಿ ಹಣದಲ್ಲಿ ಜೀವನ ಸಾಗಿಸಬೇಕು. ಮಾಸಿಕ 6 ಸಾವಿರ ರೂ. ಆದಾಯ ಮೀರುವುದಿಲ್ಲ. ಲಾಕ್ಡೌನ್ ಕಾರಣದಿಂದ ಬಸ್ ನಿಲ್ದಾಣಗಳು, ರೈಲು ನಿಲ್ದಾಣ, ವಾಹನ ರ್ಪಾಂಗ್ ಸ್ಥಳಗಳಲ್ಲಿನ ಶೌಚಗೃಹಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ಹಲವರು ಆದಾಯವೂ ಇಲ್ಲದೆ, ಊರಿಗೆ ಹೋಗಲೂ ಸಾಧ್ಯವಾಗದೆ ಜೀವನ ದೂಡುತ್ತಿದ್ದಾರೆ.
ಆಹಾರಕ್ಕೂ ಪರದಾಟ: ಲಾಕ್ಡೌನ್ ಜಾರಿಯಾದಾಗಿನಿಂದ ಪ್ರತಿನಿತ್ಯ 2 ಬಾರಿ ಶೌಚಗೃಹ ಸ್ವಚ್ಛಗೊಳಿಸಿ ದಿನಪೂರ್ತಿ ಬಾಗಿಲು ತೆರೆದು ಕುಳಿತರೂ, ಬಳಕೆ ಮಾಡá-ವವರ ಸಂಖ್ಯೆ 10 ಮೀರುವುದಿಲ್ಲ. ಹೀಗಾಗಿ ದಿನಕ್ಕೆ 50 ರೂ. ದುಡಿಮೆಯೂ ಆಗದೆ ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ವಣವಾಗಿದೆ. ದಾನಿಗಳು ನೀಡುವ ಆಹಾರದ ಪೊಟ್ಟಣವನ್ನೇ ನಂಬಿಕೊಂಡಿದ್ದೇವೆೆ ಎಂದು ಶೌಚಗೃಹ ಸಿಬ್ಬಂದಿ ಲಕ್ಷ್ಮೀಕಾಂತ ಅಳಲು ತೋಡಿಕೊಂಡರು.
ಎಟಿಎಂ ಕಾವಲುಗಾರರಿಗೂ ಆತಂಕ
ಸಿಲಿಕಾನ್ ಸಿಟಿಯಲ್ಲಿ 2 ಸಾವಿರಕ್ಕೂ ಅಧಿಕ ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಕಾವಲಿಗೆ ಬಹುತೇಕ 50 ವರ್ಷ ಮೀರಿದವರೇ ಹೆಚ್ಚಾಗಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಲಬುರಗಿಯಲ್ಲಿ ಎಟಿಎಂ ಕಾವಲು ನೌಕರನಿಗೆ ಸೋಂಕು ತಗುಲಿರುವುದರಿಂದ ಇತರೆ ಗಾರ್ಡ್ಗಳು ಸೋಂಕು ಭೀತಿಯಲ್ಲೇ ಕಾರ್ಯ ನಿರ್ವಹಿಸುವಂತಾಗಿದೆ.
| ಸತೀಶ್ ಕೆ.ಬಳ್ಳಾರಿ