ಟಾಯ್ಲೆಟ್ ಬೇಸಿನ್‌ನಲ್ಲಿತ್ತು ಬುಸ್​ ಬುಸ್ ಹಾವು; ಕೈಯಲ್ಲಿ ಹಿಡಿದು ತಂದು ಚೀಲದಲ್ಲಿ ತುಂಬಿಸಿದ ಯುವತಿ

viral video
Published on

ನವದೆಹಲಿ: ಹಾವುಗಳು ಶೂ, ಮಂಚದ ಅಡಿಯ ಖಾಲಿ ಜಾಗ, ಖಾಲಿ ಡಬ್ಬಿ ಪಾತ್ರೆ, ವಾಹನಗಳ ಒಳಗೆ ಕಾಣಿಸಿಕೊಳ್ಳುತ್ತವೆ. ಆದರೆ ಇಲ್ಲೊಂದು ಕಡೆ ಹಾವು  ಟಾಯ್ಲೆಟ್ ಬೇಸಿನ್ ಒಳಗಿನಿಂದ ಬುಸ್​ ಬುಸ್​ ಮಾಡಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಾರಾಷ್ಟ್ರದ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಮನೆಯ ಟಾಯ್ಲೆಟ್‌ ಬೇಸಿನ್ ಒಳಭಾಗದಿಂದ ಮನೆ ಮಂದಿಗೆ ಬುಸುಗುಡುವಂತೆ ಸದ್ದು ಕೇಳಿದೆ. ಹೀಗಾಗಿ ಇದೇನಿರಬಹುದು ಎಂದು ಅವರು ಟಾಯ್ಲೆಟ್ ಒಳಗೆ ಹೋಗಿ ಪರಿಶೀಲನೆ ನಡೆಸಿದಾಗ ಅದು ಹಾವು.  ನಂತರ ಹಾವು ರಕ್ಷಣೆ ಮಾಡುವವರನ್ನು ಕರೆಸಿದ್ದಾರೆ. ಮನೆಯ ಟಾಯ್ಲೆಟ್ ಒಳಗಿನಿಂದ ಹಾವನ್ನು ಹಿಡಿದು ರಕ್ಷಿಸಿದ್ದಾರೆ. ಈ ವೀಡಿಯೋವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.

ವೀಡಿಯೋದಲ್ಲಿ ಕಾಣಿಸುವಂತೆ ಈ ಹಾವು ನಿಧಾನವಾಗಿ ಟಯ್ಲೆಟ್ ಬೇಸಿನ್‌ನಿಂದ  ಹೊರಗೆ ಬರುವುದನ್ನು  ಕಾಣಬಹುದಾಗಿದೆ. ಅದು ಹೊರಗೆ ಬರುತ್ತಿದ್ದಂತೆ ಮನೆಯವರು ಕೂಡ ಅದರ ಉದ್ದವನ್ನು ನೋಡಿ ಅಚ್ಚರಿಗೊಂಡಿದ್ದಾರೆ.  ಈ ವೀಡಿಯೋದಲ್ಲಿ ಈ ಹಾವು ವಿಷಕಾರಿಯಲ್ಲ,  9 ರಿಂದ 10 ಅಡಿ ಉದ್ದ ಇತ್ತು.  ಈ ವೇಳೆ ಹಾವು ಹಿಡಿಯುವ ಶೀತಲ್ ಅವರು ಹಾವನ್ನು ಧೈರ್ಯವಾಗಿ ಕೈಯಲ್ಲಿ ಹಿಡಿದು ಮನೆಯಿಂದ ಹೊರಗೆ ತಂದು ಚೀಲದಲ್ಲಿ ತುಂಬಿಸಿದ್ದಾರೆ.  

ಈ ಹಾವುಗಳು ವಿಷಕಾರಿಯಲ್ಲ ಮತ್ತು ಸಾಮಾನ್ಯವಾಗಿ ಇಲಿಗಳು ಮತ್ತು ಕಪ್ಪೆಗಳನ್ನು ತಿನ್ನುತ್ತವೆ ಎಂದು ಶೀತಲ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net