

Toddler: ಮನೆಯಲ್ಲಿ ಆಟವಾಡುತ್ತಿದ್ದಾಗ ಮಗು ಆಕಸ್ಮಿಕವಾಗಿ ಮನೆಯ ಸ್ನಾನಗೃಹದಲ್ಲಿ ಇಟ್ಟಿದ್ದ ಬಕೆಟ್‌ನಲ್ಲಿ ಬಿದ್ದಿ ಮೃತಪಟ್ಟ ಘಟನೆ ಹೈದರಾಬಾದ್ನ ಹಯಾತ್‌ನಗರದ ಜಯ ಪ್ರಕಾಶ್‌ನಗರದಲ್ಲಿ ನಡೆದಿದೆ.
ಗುರುವಾರ (ಮೇ.22) ಮನೆಯಲ್ಲಿ ಆಟವಾಡುತ್ತಿದ್ದಾಗ ಮಗು ಆಕಸ್ಮಿಕವಾಗಿ ಮನೆಯ ಸ್ನಾನಗೃಹದಲ್ಲಿ ಇಟ್ಟಿದ್ದ ಬಕೆಟ್‌ನಲ್ಲಿ ಬಿದ್ದಿತು. ಮಗುವಿನ ತಾಯಿ ಇದನ್ನು ನೋಡಿದ ತಕ್ಷಣ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದರು. ಮಗುವಿನ ದೇಹದ ಮೇಲೆ ತೀವ್ರ ಸುಟ್ಟಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಗ ಸೋಮವಾರ (ಮೇ.26) ಮುಂಜಾನೆ ಸಾವನ್ನಪ್ಪಿದೆ.
ಹಯಾತ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಮಗುವಿನ ಶವವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. (ಏಜೆನ್ಸೀಸ್)