ಕರೊನಾ ಬುಲೆಟಿನ್​: ನಿನ್ನೆಗಿಂತ ಇಂದು ಸೋಂಕು-ಸಾವು ಎರಡರಲ್ಲೂ ಇಳಿಕೆ...

corona
Published on

ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಹೊಸದಾಗಿ 7,012 ಕೋವಿಡ್-19 ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಇದುವರೆಗಿನ ಸೋಂಕಿತರ ಪ್ರಮಾಣ ಒಟ್ಟಿಗೆ 7,65,586ಕ್ಕೆ ತಲುಪಿದೆ. ಸಮಾಧಾನದ ಸಂಗತಿ ಎಂದರೆ ನಿನ್ನೆಗಿಂತ ಇವತ್ತು ಸೋಂಕು ಹಾಗೂ ಸಾವು ಎರಡರಲ್ಲೂ ಇಳಿಕೆ ಕಂಡು ಬಂದಿದೆ.

ಮತ್ತೊಂದೆಡೆ ಗುಣಮುಖರಾಗಿರುವವರ ಪೈಕಿ ಒಂದೇ ದಿನ 8,344 ಮಂದಿ ಆಸ್ಪತ್ರೆ ಹಾಗೂ ಕೋವಿಡ್​ ಕೇರ್ ಸೆಂಟರ್​ಗಳಿಂದ ಬಿಡುಗಡೆ ಆಗಿ ಮನೆಗೆ ಮರಳಿದ್ದಾರೆ. ಈ ಮೂಲಕ ಇದುವರೆಗೆ ಗುಣವಾಗಿರುವವರ ಸಂಖ್ಯೆ ಒಟ್ಟು 6,45,825ಕ್ಕೆ ಏರಿದೆ.

ಪ್ರಸ್ತುತ ರಾಜ್ಯದಲ್ಲಿ 1,09,264 ಪ್ರಕರಣಗಳು ಸಕ್ರಿಯವಾಗಿದ್ದು, ಅವರಲ್ಲಿ ಗಂಭೀರ ರೋಗಲಕ್ಷಣಗಳಿರುವ 945 ಸೋಂಕಿತರು ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಂಕಿತರ ಪೈಕಿ ಶನಿವಾರ ಒಂದೇ ದಿನ 51 ಮಂದಿ ಕರೊನಾಗೆ ಬಲಿಯಾಗಿದ್ದು, ಕರೊನಾದಿಂದಾಗಿ ಇದುವರೆಗೆ ಮೃತಪಟ್ಟವರ ಸಂಖ್ಯೆ ಒಟ್ಟು 10,478ಕ್ಕೆ ತಲುಪಿದೆ. ರಾಜ್ಯದಲ್ಲಿ ಶನಿವಾರ ಹೊಸದಾಗಿ 7,184 ಕೋವಿಡ್-19 ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು, ಒಂದೇ ದಿನ 71 ಮಂದಿ ಕರೊನಾಗೆ ಬಲಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net