ಇಂದು ನನ್ನ... ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮಿಸಿ: CJI ಚಂದ್ರಚೂಡ್​

CJI
Published on

ನವದೆಹಲಿ: ಇಂದು (ನ.08) ಕೊನೆಯ ಕೆಲಸದ ದಿನ, ನನ್ನಿಂದ ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮೆ ಇರಲಿ ಎಂದು ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಸಿಜೆಐ (CJI) ಚಂದ್ರಚೂಡ್​ ಹೇಳಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ಕೆಳಗಿಳಿದಿರುವ ಸಿಜೆಐ ಚಂದ್ರಚೂಡ್​, ತಮ್ಮ ವೃತ್ತಿಯಿಂದ ಇದೀಗ ನಿವೃತ್ತಿ ಹೊಂದಿದ್ದಾರೆ. ಈ ಹಿನ್ನಲೆ ಇಂದು ಅವರು ಕೋರ್ಟ್​ ಹಾಲ್​ನಲ್ಲಿ ಸಹದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದರು. ''ಈ ನ್ಯಾಯಾಲಯವೇ ನನ್ನನ್ನು ಮುಂದುವರೆಸುತ್ತದೆ. ನಮ್ಮ ಅರಿವಿಗೆ ಬಾರದಂತೆ ಎಷ್ಟೋ ಜನರನ್ನು ಭೇಟಿಯಾಗಿರುತ್ತೇವೆ. ನಾನು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನನ್ನಿಂದ ತಪ್ಪಾಗಿದ್ದರೆ ಅಥವಾ ಯಾರಿಗಾದರೂ ನೋವು ಆಗಿದ್ದರೆ ದಯವಿಟ್ಟು ಕ್ಷಮಿಸಿ ಎಂದರು.

ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಕ್ಕಾಗಿ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು. ಇನ್ನು ಕೆಲವಷ್ಟು ಕೇಸ್​ಗಳಿವೆ ಎಂದು ನನ್ನ ನ್ಯಾಯಾಲಯ ಸಿಬ್ಬಂದಿಗಳು ಕೇಳಿದಾಗ, 'ನಾನು ಸಾಧ್ಯವಾದಷ್ಟು ಪ್ರಕರಣಗಳನ್ನು ತ್ವರಿತಗತಿಯಲ್ಲಿ ಪರಿಹರಿಸಲು ಬಯಸುತ್ತೇನೆ. ಕೊನೆಯ ಸಮಯದವರೆಗೂ ನ್ಯಾಯವನ್ನು ನೀಡುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಎಂದು ಅವರಿಗೆ ಹೇಳಿದ್ದೀನಿ ಎಂದು ನುಡಿದರು.

49ನೇ ಸಿಜೆಐ ಉದಯ್​ ಉಮೇಶ್​ ನಿವೃತ್ತದ ಬಳಿಕ, 2022ರ ನ.08ರಂದು 50ನೇ ಸಿಜೆಐ ಆಗಿ ಡಿ.ವೈ.ಚಂದ್ರಚೂಡ್​ ಹುದ್ದೆ ಅಲಂಕರಿದ್ದರು. ಈಗ ಇವರ ಅಧಿಕಾರ ಅವಧಿ ಮುಕ್ತಾಯಗೊಂಡಿದ್ದು, ಇಂದಿನಿಂದ 51ನೇ ಸಿಜೆಐ ಆಗಿ ಸಂಜೀವ್​ ಖನ್ನಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net