

ಬೆಂಗಳೂರು: ಬಜೆಟ್ ಮಂಡಿಸಲು ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಬೊಮ್ಮಾಯಿ, ಬಜೆಟ್ ಪ್ರತಿಗಳ ಬ್ಯಾಗ್ ನೊಂದಿಗೆ ಮಾಧ್ಯಮದ ಕ್ಯಾಮೆರಾಗಳಿಗೆ ವಿಕ್ಟರಿ ಫೋಸ್ ನೀಡಿದರು. ಸಚಿವ, ಶಾಸಕರು ಸಾಥ್ ನೀಡಿದರು. ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯದ ಜನತೆಗೆ ಒಳಿತಾಗಲೆಂದು ರಾಜ್ಯದ ಮಹಾಜನತೆ ಹೆಸರಿನಲ್ಲಿ ಪೂಜೆ ಸಲ್ಲಿಸಿರುವೆ ಎಂದು ಹೇಳಿದರು.
2023-24ನೇ ಸಾಲಿನ ಬಜೆಟ್ ಮಂಡನೆಗೆ ಮುನ್ನ ಶ್ರೀಕಂಠೇಶ್ವರ ಹಾಗೂ ಮಾರುತಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಈ ಬಾರಿಯದು ಜನಸ್ನೇಹಿ ಬಜೆಟ್ ಎಂದು ಸಿಎಂ ಬೊಮ್ಮಾಯಿ ಈಗಾಗಲೇ ಹೇಳಿದ್ದಾರೆ.
ಬಿಜೆಪಿ ಆಡಳಿತಾವಧಿಯ ಕೊನೆಯ ಹಾಗೂ ಬಸವರಾಜ ಬೊಮ್ಮಾಯಿಯವರ ಎರಡನೇ ಮುಂಗಡಪತ್ರ ಇದಾಗಿದೆ.