

ಸದೃಢ ಬದುಕು ಕಟ್ಟಿಕೊಳ್ಳಲು ಮಾನಸಿಕ ಆರೋಗ್ಯ ಅತ್ಯಗತ್ಯ. ಆರ್ಥಿಕ ಸಂಕಷ್ಟ, ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆ, ಮಾದಕ ವ್ಯಸನ ಹೀಗೆ ಹಲವು ವಿಧದಲ್ಲಿ ಮಾನಸಿಕ ರೋಗ ಮನುಷ್ಯರನ್ನು ಕಾಡುತ್ತಿದೆ. ಇದೆಲ್ಲದರ ಜತೆಗೆ ಕರೊನಾ ಮಹಾಮಾರಿ ಹಲವರ ಬದುಕನ್ನು ಕಸಿದಿದೆ. ಕರೊನಾ ಹೊಡೆತದಿಂದಾಗಿ ಹಲವರು ಮಾನಸಿಕ ಕಾಯಿಲೆಗೆ ತುತ್ತಾಗಿದ್ದಾರೆ. ಮಾನಸಿಕ ರೋಗ ಯಾರಿಗೆ, ಯಾವ ಕಾರಣಕ್ಕೆ ಬರುತ್ತದೆ. ಅದರಿಂದ ಹೊರಬರುವ ಮಾರ್ಗ ಹೇಗೆ ಎಂಬುದನ್ನು ಮನೋರೋಗ ತಜ್ಞರು ವಿಜಯವಾಣಿ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.
| ಸುಭಾಷ್ ಎಚ್.ಜಿ., ಆಪ್ತ ಸಮಾಲೋಚಕರು
ಶಾಲಾ ಮಕ್ಕಳಿಗೆ ಚಟುವಟಿಕೆಗಳಿಲ್ಲ. ಜತೆಗೆ ಆನ್ಲೈನ್ ತರಗತಿಗಳಿಂದ ಎದುರಾಗುವ ಮಾನಸಿಕ ಪರಿಣಾಮವೇನು? ಆನ್ಲೈನ್ ಪಾಠ ಗ್ರಹಿಸಲು ಮಕ್ಕಳು ಶಕ್ತರೇ?
ಶಾಲೆಗೆ ತೆರಳಿದರೆ ಅವರ ಮನಸ್ಥಿತಿಗೆ ಹೊಂದುವ, ಸಮವಯಸ್ಕ ಮಕ್ಕಳ ಜತೆ ಸೇರಬಹುದು. ಆದರೆ, ಆನ್ಲೈನ್ ತರಗತಿಯಿಂದ ಇದು ಸಾಧ್ಯವಾಗುವುದಿಲ್ಲ. ಸತತ 8 ಗಂಟೆ ಆನ್ಲೈನ್ ತರಗತಿಗೆ ಪೂರಕ ವಾತಾವರಣ ಮನೆಯಲ್ಲಿ ನಿರ್ವಿುಸುವುದು ಕಷ್ಟ. ಮಗುವೂ ತನ್ನದೇ ರೀತಿಯಲ್ಲಿ ಹಾಗೂ ಬೇರೆ ಪ್ರಮಾಣದಲ್ಲಿ ಹೊಂದಿಕೊಳ್ಳಬಹುದು. ಆದರೆ, ಮಕ್ಕಳು ಗ್ರಹಿಸುತ್ತಿದ್ದಿರಾ? ಇಲ್ಲವಾ? ಎಂದು ಉಪನ್ಯಾಸಕರಿಗೆ ತಿಳಿದುಕೊಳ್ಳುವುದು ಕಷ್ಟ.