

ನವದೆಹಲಿ: 2020ರ ಕೊನೆಯ ಸೂರ್ಯಗ್ರಹಣ ಡಿ.14ರಂದು ಸಂಭವಿಸಲಿದ್ದು, ಇದು ಪೂರ್ಣ ಗ್ರಹಣವಾಗಿದೆ. ಆದರೆ, ಭಾರತದಲ್ಲಿ ಗೋಚರಿಸುವುದಿಲ್ಲ.
ಈ ಹಿಂದೆ ಜೂನ್ 21ರಂದು ಸೂರ್ಯಗ್ರಹಣಕ್ಕೆ ಜಗತ್ತು ಸಾಕ್ಷಿಯಾಗಿತ್ತು. 2020ರಲ್ಲಿ ಒಟ್ಟು ನಾಲ್ಕು ಬಾರಿ ಗ್ರಹಣ ಸಂಭವಿಸಿವೆ. ಭಾರತೀಯ ಕಾಲಮಾನ ಸೋಮವಾರ ರಾತ್ರಿ 7 ಗಂಟೆ 4 ನಿಮಿಷಕ್ಕೆ ಭಾಗಶಃ ಗ್ರಹಣ ಪ್ರಾರಂಭವಾಗಲಿದ್ದು, ಪೂರ್ಣ ಪ್ರಮಾಣದ ಸೂರ್ಯಗ್ರಹಣ 8 ಗಂಟೆ 2 ನಿಮಿಷಕ್ಕೆ ಸಂಭವಿಸಲಿದೆ. ರಾತ್ರಿ 9.43ಕ್ಕೆ ಅದು ಗರಿಷ್ಠ ಪ್ರಮಾಣಕ್ಕೆ ತಲುಪಿ ಮಧ್ಯರಾತ್ರಿ 12 ಗಂಟೆ 23 ನಿಮಿಷಕ್ಕೆ ಅಂತ್ಯಗೊಳ್ಳಲಿದೆ.
ಪೂರ್ಣ ಗ್ರಹಣವು ಚಿಲಿ, ಅರ್ಜೆಂಟೀನಾದ ಟೆಮುಕೋ, ವಿಲರಿಕಾ, ಸಿಯೆರಾ ಕೊಲೊರಾಡೊ ನಗರಗಳಲ್ಲಿ, ದಕ್ಷಿಣ ಅಂಟಾರ್ಕ್ಟಿಕಾ, ದಕ್ಷಿಣ ಅಮೆರಿಕ ಹಾಗೂ ಶಾಂತ ಸಾಗರದ ಹಲವು ದೇಶಗಳು ಭಾಗ ಭಾಗಶಃ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿವೆ.