ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇಂದೇ ಕೊನೆ: ಇಲಾಖೆ ಹೇಳಿದ್ದೇನು? | ITR

Untitled design - 2025-09-16T075522.927
Published on

ITR: ಆದಾಯ ತೆರಿಗೆ ಇಲಾಖೆಯು 2025-26 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಲು ಅಂತಿಮ ದಿನ ಮತ್ತು ಗಡುವನ್ನು ಒಂದು ದಿನಕ್ಕೆ ವಿಸ್ತರಣೆ ಮಾಡಿದೆ.

ಹೌದು, ಇದೇ ಜ.31 ರಂದು ನಿಗದಿಯಾಗಿದ್ದ ದಿನಾಂಕವನ್ನು 2025ರ ಸೆಪ್ಟೆಂಬರ್ 15 ರವರೆಗೆ ಈ ಹಿಂದೆ ವಿಸ್ತರಿಸಲಾಗಿದೆ. ಇದೀಗ ಸೆ.16ರಂದು ಅಂದರೆ ಇಂದು ಮಂಗಳವಾರ ಅಂತಿಮ ದಿನಾಂಕ ಎಂದು ಇಲಾಖೆ ತಿಳಿಸಿದೆ.

ಇನ್ನು ಈ ಕುರಿತು ಆದಾಯ ತೆರಿಗೆ ಇಲಾಖೆಯ ತಮ್ಮ ಎಕ್ಸ್​ ಹ್ಯಾಂಡಲ್​ನಲ್ಲಿ ರಾತ್ರಿ 11.48ಕ್ಕೆ ಪೋಸ್ಟ್ ಹಂಚಿಕೊಂಡಿದೆ.

ಆದಾಯ ತೆರಿಗೆ ಇ-ಫೈಲಿಂಗ್​ ಪೋರ್ಟಲ್​​ ವೆಬ್​ಸೈಟ್​ incometax,gov.in ನಲ್ಲಿನ ತಾಂತ್ರಿಕ ದೋಷಗಳ ಬಗ್ಗೆ ಹಲವಾರು ತೆರಿಗೆದಾರರು ದೂರು ನೀಡಿದ ಹಿನ್ನಲೆ ಐಟಿಆರ್​ ದಿನಾಂಕವನ್ನು ವಿಸ್ತರಣೆ ಮಾಡಿದೆ.(ಏಜೆನ್ಸೀಸ್​)

ಈ ಪೋಸ್ಟ್ ನಂತರ ಕೆಲವೇ ನಿಮಿಷಗಳ ನಂತರ, ಮತ್ತೊಂದು ಪೋಸ್ಟ್ ಸೋಮವಾರದವರೆಗೆ 7.3 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ. ಇದು ಹೊಸ ದಾಖಲೆಯಾಗಿದೆ ಎಂದು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net