ಇಂದಿನ ದಿನ ನಮ್ಮದು...

Happy
Published on

ಕಳೆದೆರಡು ವಾರಗಳ ಕೆಲವು ಕಹಿ ಘಟನೆಗಳನ್ನು ನೆನೆಯುವಾಗ, ಮಾನವ ಜೀವನದ ಒಂದು ಸತ್ಯವಂತೂ ಎದ್ದು ಕಾಣುತ್ತಿದೆ. ಇಂದಿನ ದಿನ ನಮ್ಮ ದಿನ. ಆದುದರಿಂದ ಇಂದಿನ ದಿನವನ್ನು ಸಂಭ್ರಮಿಸಿ, ಸಂಬಂಧಗಳನ್ನು ಬೆಳೆಸಿ, ಆಚರಿಸಿ, ಕ್ಷಮಿಸಿ, ಪ್ರೀತಿಸಿ, ಬದುಕಿ.

ಏಕೆಂದರೆ ನಾಳಿನ ಗ್ಯಾರಂಟಿ ನಮಗಿಲ್ಲ. ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಪ್ರವಾಸಿಗರು, ಆರ್​ಸಿಬಿ ವಿಜಯೋತ್ಸವದಲ್ಲಿ ಮೃತಪಟ್ಟ ನತದೃಷ್ಟ ಕ್ರಿಕೆಟ್ ಅಭಿಮಾನಿಗಳು, ಅಹ್ಮದಾಬಾದ್​ನ ವಿಮಾನ ಅಪಘಾತಕ್ಕೆ ಬಲಿಯಾದ ಮುಗ್ಧ ಪ್ರಯಾಣಿಕರು, ಅಲ್ಲಿಯ ಮೆಡಿಕಲ್ ಕಾಲೇಜಿನ ಹಾಸ್ಟೆಲ್​ನಲ್ಲಿದ್ದ ಸೇವಾನಿರತ ವೈದ್ಯರು ಅಥವಾ ಇರಾನ್- ಇಸ್ರೇಲ್​ನ ಭೀಕರ ಯುದ್ಧದಲ್ಲಿ ಮಡಿದ ಅಮಾಯಕ ಜನರು, ಅವರಲ್ಲಿ ಯಾರೂ ಅಂದಿನ ದಿನ ತಮ್ಮ ಕೊನೆಯ ದಿನವೆಂದು ಖಂಡಿತವಾಗಿಯೂ ಭಾವಿಸಿರಲಿಕ್ಕಿಲ್ಲ. ಇವೆಲ್ಲ ಘಟನೆಗಳು ನಮಗೆ ಒಂದು ಪಾಠವನ್ನು ಕಲಿಸುತ್ತಿವೆ. ಸಾವು ಹೇಳಿ ಕೇಳಿ ಬರುವುದಿಲ್ಲ. ಅದು ನಮ್ಮ ಅನುಮತಿಯಿಲ್ಲದೆ ನಮ್ಮ ಬದುಕಿನ ಮನೆಗೆ ನುಗ್ಗುತ್ತದೆ. ನಮ್ಮನ್ನು ಎತ್ತಿಕೊಂಡು ಹೋಗುತ್ತದೆ.

ಅದರ ಮೊದಲು ನಾನು ಸಂಪೂರ್ಣವಾಗಿ ಬದುಕಬೇಕು. ಪರರಿಗಾಗಿ ಬದುಕಬೇಕು. ಒಂದು ಕಥೆ ನೆನಪಾಗುತ್ತದೆ. ಒಬ್ಬಾತನಿಗೆ ಕನಸು ಬಿತ್ತು. ಆತನ ಮರಣದ ಕನಸು. ಕನಸಿನಲ್ಲಿ ದೇವದೂತ ತನ್ನ ಕೈಯಲ್ಲಿ ಒಂದು ಸೂಟ್​ಕೇಸ್ ಹಿಡಿದು ತನ್ನೆಡೆಗೆ ಬರುವುದನ್ನು ಕಂಡು ಆತ ಭಯ ಪಡುತ್ತಾನೆ. ಆಗ ದೇವದೂತ ಹೇಳುತ್ತಾನೆ: ಎಲೇ ಮಾನವ, ನಿನ್ನ ಸಮಯ ಮುಗಿಯಿತು. ನನ್ನ ಜೊತೆಗೆ ಹೊರಡು. ಆಗ ಆ ಮಾನವ, ‘ಈಗ? ಇಷ್ಟು ಬೇಗ? ನನ್ನ ಜೀವನದಲ್ಲಿ ಸಾಧಿಸಲಿರುವ ಇನ್ನೂ ಹಲವಾರು ಯೋಜನೆಗಳು ಬಾಕಿ ಇವೆ’ ಎಂದ. ಆದರೆ ದೇವದೂತ, ಕ್ಷಮಿಸು ಮಾನವ. ನಿನ್ನ ಬದುಕಿನ ಸಂಜೆ ಆಯಿತು, ಬಾ ನನ್ನ ಜೊತೆ ಎಂದ. ಮಾನವನಿಗೆ ದೇವದೂತ ತಂದ ಸೂಟ್ ಕೇಸ್ ನಲ್ಲಿ ಏನಿದೆ ಎಂಬ ಕುತೂಹಲ. ಹೌದು, ಅದರಲ್ಲೇನಿತ್ತು?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net