

ಬೆಂಗಳೂರು: ಚುನಾವಣೆಯ ಬಹಿರಂಗ ಪ್ರಚಾರ ಇಂದು ಅಂತ್ಯವಾಗಲಿದ್ದು ಕಾಂಗ್ರೆಸ್ ಬೆಂಗಳೂರಿಗೆ ಹೆಚ್ಚು ಗಮನವನ್ನು ನೀಡಿದೆ ಎಂದೇ ಹೇಳಬಹುದು. ಕೊನೆಯ ದಿನವಾದರಿಂದ ಇಂದು ಬೆಂಗಳೂರಿನಲ್ಲಿ ಪ್ರಿಯಾಂಕಾ ಗಾಂಧಿ ಎರಡು ಕಡೆ ರೋಡ್ ಶೋ ನಡೆಸಲಿದ್ದಾರೆ.
ಪ್ರಿಯಾಂಕಾ ಗಾಂಧಿ ಚಿಕ್ಕಪೇಟೆಯಲ್ಲಿ ರೋಡ್ ಶೋ ನಡೆಸಲಿದ್ದು ಬಳಿಕ ವಿಜಯನಗರದಲ್ಲಿ ಮತ್ತೊಂದು ರೋಡ್ ಶೋದಲ್ಲಿ ಭಾಗಿ ಆಗಲಿದ್ದಾರೆ. ಜಿಟಿ ಮಾಲ್ನಿಂದ ಮಾರುತಿ ಆಸ್ಪತ್ರೆಯವರೆಗೆ ರೋಡ್ ಶೋ ನಡೆಯಲಿದ್ದು ವಿಜಯನಗರ ಹಾಗೂ ಗೋವಿಂದರಾಜ್ ನಗರದ ಮತದಾರರ ಸೆಳೆಯುವ ಗುರಿಯನ್ನು ಇಡಲಾಗಿದೆ ಎಂದು ಮೇಲ್ನೋಟಕ್ಕೆ ತೋರುತ್ತಿದೆ.
ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಕೂಡ ಬೆಂಗಳೂರಿನಲ್ಲಿ ಪ್ರಚಾರ ನಡೆಸುವ ಸಾಧ್ಯತೆ ಇದ್ದು ಕಾಂಗ್ರೆಸ್ ಕೊನೆಯ ಹಂತದ ಪ್ರಚಾರದ ಸಿದ್ಧತೆ ನಡೆಸಿದೆ.