

ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಅತಿ ಹೆಚ್ಚಿನ ಸಂಖ್ಯೆಯಲ್ಲಿ 41,703 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಗುಣಮುಖರ ಒಟ್ಟು ಸಂಖ್ಯೆ 31.62 ಲಕ್ಷ ಮೀರಿದೆ. ಆದರೆ ಸೋಂಕಿತರಲ್ಲಿ ಚಿಕಿತ್ಸೆ ಫಲಿಸದೆ 32 ಮಂದಿ ಸಾವಿಗೀಡಾಗಿದ್ದು, ಮೃತರ ಒಟ್ಟು ಸಂಖ್ಯೆ 38,614ಕ್ಕೆ ಏರಿಕೆಯಾಗಿದೆ.
ಬೆಂಗಳೂರು ನಗರದಲ್ಲಿ 9 ಮಂದಿ, ದಕ್ಷಿಣ ಕನ್ನಡ, ಮೈಸೂರು, ಉಡುಪಿಯಲ್ಲಿ ತಲಾ ಮೂವರು, ಹಾವೇರಿ ಮತ್ತು ಕಲಬುರಗಿಯಲ್ಲಿ ತಲಾ ಇಬ್ಬರು, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಗದಗ, ಹಾಸನ, ಮಂಡ್ಯ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ಉತ್ತರ ಕನ್ನಡದಲ್ಲಿ ತಲಾ ಒಬ್ಬರಂತೆ 32 ಮಂದಿ ಸಾವಿಗೀಡಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 1.4 ಲಕ್ಷ ಕೋವಿಡ್ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, 46,426 ಸೋಂಕು ಪ್ರಕರಣಗಳು ದೃಢಪಟ್ಟಿವೆ. ದಿನದ ಸೋಂಕು ಪ್ರಮಾಣ ದರ ಶೇ. 32.95 ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3.62 ಲಕ್ಷ ತಲುಪಿದೆ.
ಬೆಂಗಳೂರು ನಗರದಲ್ಲಿ ಸೋಂಕು ಮತ್ತೆ ಏರಿಕೆಯಾಗಿದ್ದು, 21,569 ಪ್ರಕರಣಗಳು ದೃಢಪಟ್ಟಿವೆ. ಮೈಸೂರು 4,105, ತುಮಕೂರು 2,960, ಹಾಸನ 1,908, ಮಂಡ್ಯ 1,837, ಬೆಂಗಳೂರು ಗ್ರಾಮಾಂತರ 1,607, ಧಾರವಾಡ 1,407, ಚಿಕ್ಕಬಳ್ಳಾಪುರ 905, ಬಳ್ಳಾರಿ 817, ಉಡುಪಿ 677, ಕೋಲಾರ 661, ಕೊಡಗು 657, ಚಾಮರಾಜನಗರ 656, ದಕ್ಷಿಣ ಕನ್ನಡ 655, ಚಿತ್ರದುರ್ಗ 642, ಉತ್ತರ ಕನ್ನಡ 626, ಬೆಳಗಾವಿ 625, ಶಿವಮೊಗ್ಗ 537, ಕೊಪ್ಪಳ 525 ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸೋಂಕು ವ್ಯಾಪಿಸಿದೆ.