ರಾಜ್ಯದಲ್ಲೀಗ ಕರೊನಾ ಮತ್ತಷ್ಟು ಆತಂಕಕಾರಿ; ಇಂದು 34 ಸಾವಿರ ಪ್ರಕರಣ, ಒಂದೇ ದಿನದಲ್ಲಿ ಪಾಸಿಟಿವಿಟಿ ದರ ಶೇ. 5 ಏರಿಕೆ

Corona Positive Case - Copy
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ಇದೀಗ ಮತ್ತಷ್ಟು ಆತಂಕಕಾರಿಯಾಗಿ ಪರಿಣಮಿಸಿದ್ದು, ದಿನೇದಿನೆ ಕರೊನಾ ಸೋಂಕು ತೀವ್ರಗತಿಯಲ್ಲಿ ಏರುತ್ತಿದೆ. ಮತ್ತೊಂದೆಡೆ ಇವತ್ತೊಂದೇ ದಿನದಲ್ಲಿ ಪಾಸಿಟಿವಿಟಿ ದರದಲ್ಲಿ ಶೇ. 5 ಏರಿಕೆ ಕಂಡುಬಂದಿದೆ.

ರಾಜ್ಯದಲ್ಲಿ ಇಂದು ಹೊಸದಾಗಿ 34,047 ಜನರಲ್ಲಿ ಕೋವಿಡ್​-19 ಸೋಂಕು ದೃಢಪಟ್ಟಿದೆ. ಆ ಪೈಕಿ ರಾಜಧಾನಿ ಬೆಂಗಳೂರಿನಲ್ಲೇ 21,017 ಜನರಲ್ಲಿ ಸೋಂಕು ಕಂಡು ಬಂದಿದೆ. ಈ ಮೂಲಕ ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.46 ಲಕ್ಷ ತಲುಪಿದ್ದರೆ, ಇಡೀ ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 1,97,982ಕ್ಕೆ ಏರಿದೆ.

ಇನ್ನು ನಿನ್ನೆ ಶೇ. 15ರಷ್ಟಿದ್ದ ಪಾಸಿಟಿವಿಟಿ ಪ್ರಮಾಣ ಇಂದು ಏಕಾಏಕಿ ಏರಿದ್ದು, ಶೇ. 20ಕ್ಕೆ ಸಮೀಪಿಸಿದೆ. ಇಂದು ರಾಜ್ಯದಲ್ಲಿನ ಕೋವಿಡ್ ಸೋಂಕು ಪಾಸಿಟಿವಿಟಿ ದರ ಶೇ. 19.29 ಆಗಿದೆ. ಮಾತ್ರವಲ್ಲ, ಕಳೆದ 24 ಗಂಟೆಗಳಲ್ಲಿ ಕೋವಿಡ್​ಗೆ 13 ಮಂದಿ ಬಲಿಯಾಗಿದ್ದಾರೆ. ಒಟ್ಟಿನಲ್ಲಿ ವಾರಾಂತ್ಯ ಹಾಗೂ ನೈಟ್ ಕರ್ಫ್ಯೂ ಇದ್ದಾಗ್ಯೂ ಕೋವಿಡ್​ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವುದು ಆತಂಕ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net