ರಾಜ್ಯದಲ್ಲಿ ಹತೋಟಿಗೆ ಸಿಗುತ್ತಿಲ್ಲ ಕರೊನಾ; ಇಂದು 11 ಸಾವಿರಕ್ಕೂ ಅಧಿಕ ಪ್ರಕರಣ..

Omicron
Published on

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಹತೋಟಿಗೆ ಸಿಗದೆ ವ್ಯಾಪಿಸುತ್ತಿದ್ದು, ಇಂದೂ ಹತ್ತಿರ ಹತ್ತಿರ 12 ಸಾವಿರ ಪ್ರಕರಣ ವರದಿಯಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 11,698 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಪೈಕಿ ಬೆಂಗಳೂರಿನಲ್ಲೇ ಹೊಸದಾಗಿ 9,221 ಮಂದಿಯಲ್ಲಿ ಕರೊನಾ ದೃಢಪಟ್ಟಿದೆ.

ಹೆಚ್ಚುತ್ತಿರುವ ಪ್ರಕರಣಗಳ ಜತೆಗೆ ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಕೂಡ ಹೆಚ್ಚಾಗಿದ್ದು, ಇಂದು ಅದು ಶೇ. 7.77ಕ್ಕೆ ತಲುಪಿದೆ. ಮಾತ್ರವಲ್ಲ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 60,148ಕ್ಕೆ ಏರಿದೆ.

ಇನ್ನೊಂದೆಡೆ ಒಮಿಕ್ರಾನ್ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದ್ದು, ಕೋವಿಡ್ ಆತಂಕ ತೀವ್ರಗೊಂಡಿದೆ. ಬೆಂಗಳೂರಿನಲ್ಲೇ ಇಂದು 146 ಒಮಿಕ್ರಾನ್ ಪ್ರಕರಣಗಳು ವರಿದಯಾಗಿದ್ದು, ರಾಜ್ಯದಲ್ಲಿನ ಒಟ್ಟು ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ 479ಕ್ಕೆ ತಲುಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net