VIDEO | ವಿಶ್ವದಾಖಲೆ ಮಾಡಲು ಹಣೆಯಿಂದ ಬಾಟಲ್ ಕ್ಯಾಪ್ ತೆಗೆದ ವ್ಯಕ್ತಿ! ನೆಟ್ಟಿಗರ ಹುಬ್ಬೇರಿಸುವಂತಿದೆ ಈ ವೈರಲ್ ವಿಡಿಯೋ

Untitled design - 2024-02-25T203342.437
Published on

ಹೊಸದಿಲ್ಲಿ: ನಾವೆಲ್ಲಾ ಗಮನಿಸಿರುವಂತೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ಬುಕ್​ಗೆ ತಮ್ಮ ಹೆಸರನ್ನು ಸೇರಿಸಲು ಹಲವರು ನಾನಾ ಕಸರತ್ತು ಮಾಡುತ್ತಾರೆ. ವಿಧವಿಧವಾಗಿ, ವಿಭಿನ್ನವಾಗಿ ದಾಖಲೆಗಳನ್ನು ನಿರ್ಮಿಸುವ ಮೂಲಕ ತಾವು ಕೂಡ ವಿಶ್ವದಾಖಲೆ ಪುಟಕ್ಕೆ ಸೇರುವ ತವಕ ಅನೇಕರದ್ದು, ಇದೇ ರೀತಿ ಇಲ್ಲೊಬ್ಬ ವ್ಯಕ್ತಿ ಹಣೆಯಿಂದ ಬಾಟಲ್​ ಕ್ಯಾಪ್ ಓಪನ್​ ಮಾಡಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ನಿಬ್ಬೆರಗಾಗುವಂತೆ ಮಾಡಿದೆ.

ಈ ಹಿಂದೆಲ್ಲಾ ಅತೀ ಹೆಚ್ಚು ತೂಕ ಹೊಂದಿರುವ ವ್ಯಕ್ತಿ, ಅತೀ ಎತ್ತರದ ಯುವಕ, ಹೆಚ್ಚು ಉದ್ದದ ಮೀಸೆ ಹೊಂದಿರುವವ ಹೀಗೆ ಹಲವಾರು ದಾಖಲೆಗಳನ್ನು ಮಾಡಿರುವವರ ನಿದರ್ಶನಗಳು ಇಂದು ನಮ್ಮ ಮುಂದಿವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಕೂಡ ಇದೇ ರೀತಿಯ ದಾಖಲೆಯನ್ನು ತೋರಿಸುತ್ತಿದೆ. ಕೇವಲ ತನ್ನ ಹಣೆಯಿಂದ ಈ ಯುವಕ ಬಾಟಲ್ ಮುಚ್ಚಳ ತೆಗೆದು ವಿಶ್ಚದಾಖಲೆಯ ಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.

"ಒಂದು ನಿಮಿಷದಲ್ಲಿ ಎಷ್ಟು ಬಾಟಲಿ ಕ್ಯಾಪ್​ ತೆಗೆಯಲು ಆತನಿಗೆ ಸಾಧ್ಯ ಎಂಬುದು ಚಾಲೆಂಚ್! ಕೇವಲ ಹಣೆಯನ್ನು ಉಪಯೋಗಿಸಿ ಈತ ತೆಗೆದುಹಾಕಿದ ಬಾಟಲಿಯ ಮುಚ್ಚಳಗಳ ದೃಶ್ಯ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ದಾಖಲೆ ಮುರಿಯಲು ಪಾಕಿಸ್ತಾನಿ ವ್ಯಕ್ತಿಯ ನಿರಂತರ ಪ್ರಯತ್ನವನ್ನು ನೀವು ವಿಡಿಯೋದಲ್ಲಿ ನೋಡಬಹುದು.

ಯುವಕನನ್ನು ಮುಹಮ್ಮದ್ ರಶೀದ್ ಎಂದು ಹೇಳಲಾಗಿದ್ದು, ಮರದ ತುಂಡಿನಿಂದ ಕೂಡಿದ ಮೇಜಿನ ಅಂಚಿಗೆ ಬಾಟಲಿಗಳನ್ನು ಹಿಡಿದು ತನ್ನ ಹಣೆಯಿಂದ ಓಪನ್ ಮಾಡಿದ್ದಾನೆ. ರಶೀದ್ ಫೆಬ್ರವರಿ 2023ರಲ್ಲಿ ಒಂದು ನಿಮಿಷದಲ್ಲಿ 77 ಬಾಟಲಿಯ ಮುಚ್ಚಳಗಳನ್ನು ತೆಗೆದುಹಾಕುವ ಮುಖೇನ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ವೀಡಿಯೊ ಇಲ್ಲಿಯವರೆಗೆ 1.7 ಮಿಲಿಯನ್ ವೀಕ್ಷಣೆಗಳು ಪಡೆದಿದ್ದು, ವ್ಯಾಪಕವಾಗಿ ಹಂಚಿಕೆಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net