ಉದ್ಯೋಗ ನೀಡುವುದಾಗಿ ವಂಚನೆ

Huge Fraud
Published on

ಗಂಗೊಳ್ಳಿ: ಗಂಗೊಳ್ಳಿ ಗ್ರಾಮದ ಅಗಪಿತಾಸ್ ಪ್ರೆಂಕಿ ರೆಬೆರೋ ಅವರಿಗೆ ಉದ್ಯೋಗ ನೀಡುವುದಾಗಿ ಲಕ್ಷಾಂತರ ರೂ. ಪಡೆದು ವಂಚಿಸಿರುವ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೆಬೆರೋ ಅವರ ಮೈಲ್ ಖಾತೆಗೆ ಬಂದ ಮೆಸೇಜ್‌ನಲ್ಲಿ ಕೆನಡಾದಲ್ಲಿ ಉದ್ಯೋಗಕ್ಕೆ ಆಫರ್ ನೀಡಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ರೆಬೆರೋ ಫಾರ್ಮ್ ತುಂಬಿ ಸಹಿ ಮಾಡಿ ನಂತರ ಫಾರ್ಮ್ ಹಾಗೂ ಇತರ ದಾಖಲೆಗಳನ್ನು ಸ್ಕಾೃನ್ ಮಾಡಿ ಕಳುಹಿಸಿದ್ದರು. ನಂತರ ಹಂತ ಹಂತವಾಗಿ ಮೇ 9ರಿಂದ ಮೇ 27ರವರೆಗೆ ಅವರನ್ನು ನಂಬಿಸಿ ಅಪರಿಚಿತರು ಒಟ್ಟು 2,27,441 ರೂ.ಗಳವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net