ಗಂಗೊಳ್ಳಿ: ತಲ್ಲೂರಿನ ಸಪ್ತಸ್ವರ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಸ್ವಸಹಾಯ ಸಂಘದ ಸದಸ್ಯರಿಗೆ ಬ್ಯಾಗ್ ವಿತರಣೆ ಮತ್ತು ವೈದ್ಯಕೀಯ ನೆರವು ಹಸ್ತಾಂತರ ಕಾರ್ಯಕ್ರಮ ತಲ್ಲೂರಿನಲ್ಲಿ ಭಾನುವಾರ ನಡೆಯಿತು.
ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ರಿತೇಶ್ ದೇವಾಡಿಗ ಮತ್ತು ಕಮಲಾ ದೇವಾಡಿಗ ಅವರಿಗೆ ವೈದ್ಯಕೀಯ ನೆರವು ಹಸ್ತಾಂತರಿಸಲಾಯಿತು. ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ. ಅವರನ್ನು ಸನ್ಮಾನಿಸಲಾಯಿತು.
ಸಪ್ತಸ್ವರ ವಿವಿಧೋದ್ದೇಶ ಸಹಕಾರಿ ಸಂಘ ತಲ್ಲೂರು ಅಧ್ಯಕ್ಷ ಚಂದ್ರ ದೇವಾಡಿಗ ಹರ್ಕೂರು ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ., ಉದಯ ಕುಮಾರ್ ಹಟ್ಟಿಯಂಗಡಿ, ಆಲೂರು ಹರ್ಕೂರು ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಂಜಯ್ಯ ಶೆಟ್ಟಿ ಹರ್ಕೂರು, ಜೀವನ ಕುಮಾರ್, ನಾಗೂರು ಶಾಖಾ ವ್ಯವಸ್ಥಾಪಕ ಕರುಣಾಕರ ದೇವಾಡಿಗ, ಚಿತ್ತೂರು ಶಾಖೆ ವ್ಯವಸ್ಥಾಪಕ ಸತೀಶ್ ದೇವಾಡಿಗ, ಸಂಘದ ನಿರ್ದೇಶಕರು ಉಪಸ್ಥಿತರಿದ್ದರು. ನಿರ್ದೇಶಕ ರಾಜೇಶ್ ದೇವಾಡಿಗ ಸ್ವಾಗತಿಸಿದರು. ಸಿಇಒ ವಿಶಾಲ ದೇವಾಡಿಗ ಪ್ರಸ್ತಾವಿಸಿದರು. ಸುಶೀಲಾ ದೇವಾಡಿಗ ವಂದಿಸಿದರು.