ಜೀವನ ಸುಗಮವಾಗಿರಲು ತಪ ಧರ್ಮ ಪಾಲನೆ ಅಗತ್ಯ

14-RPT-1
ರಿಪ್ಪನ್‌ಪೇಟೆಯ ಹೊಂಬುಜ ಜೈನ ಮಠದಲ್ಲಿ ದಶಲಕ್ಷಣ ಪರ್ವದ ಹಿನ್ನೆಲೆಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಆರ್ಯಿಕಾ ಶ್ರೀ 105 ಶಿವಮತಿ ಮಾತಾಜಿ, ಭಕ್ತರು ಇದ್ದರು.
Published on

ರಿಪ್ಪನ್‌ಪೇಟೆ: ಮನುಷ್ಯನ ಜೀವನ ಸುಗಮವಾಗಿರಲು ಧರ್ಮಾಚರಣೆ ಮೂಲಕ ಗುರಿ ಸಾಧಿಸುವ ತಪಸ್ಸು ಪಾಲನೆ ಮಾಡುವುದು ಅಗತ್ಯ ಎಂದು ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಹೊಂಬುಜದಲ್ಲಿ ದಶಲಕ್ಷಣ ಪರ್ವದ ಏಳನೇ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಉತ್ತಮ ತಪ ಧರ್ಮ ಎಂದರೆ ಗೃಹಸ್ಥರು ದೈನಂದಿನ ದಿನಚರಿಯಲ್ಲಿ ಧರ್ಮ ಶ್ರದ್ಧೆ, ನಿಷ್ಠೆಯನ್ನು ತಪಸ್ಸಿನಂತೆ ದೃಢಸಂಕಲ್ಪದಿಂದ ಆಚರಿಸುವುದು. ತಪದ ಹಾದಿಯಲ್ಲಿ ಕಠಿಣ ನಿಯಮಗಳ ಮೂಲಕ ಸಾಧನೆಯ ಗುರಿ ತಲುಪಬಹುದು ಎಂದು ತಿಳಿಸಿದರು.

ಆರ್ಯಿಕಾ ಶ್ರೀ 105 ಶಿವಮತಿ ಮಾತಾಜಿ ಮಾತನಾಡಿ, ತಪಃ ಧರ್ಮ ಪಾಲನೆಯಿಂದ ಸಾಧನಾ ಮಾರ್ಗವನ್ನು ಜೈನ ಶ್ರಾವಕರಿಗೆ ತೋರಿಸಿಕೊಟ್ಟಿದ್ದು ಎಲ್ಲರೂ ಪಾಪ ವಿಮೋಚನೆಗಾಗಿ ತಪಃ ಧರ್ಮ ಆಚರಿಸುವುದು ಅನಿವಾರ್ಯ. ತಪಸ್ಸಿನಂತೆ ಧರ್ಮ ಪಾಲನೆ ಮಾಡಿ ಜೀವನದಲ್ಲಿ ಉತ್ತಮ ಫಲ ಕಂಡುಕೊಳ್ಳಬೇಕು ಎಂದರು.

ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಜಟ್ಟಿಂಗರಾಯ ಕ್ಷೇತ್ರಪಾಲ ಸನ್ನಿಧಿಯಲ್ಲಿ ಧಾರ್ಮಿಕ ವಿಧಾನಗಳು ಪೂರ್ವ ಪರಂಪರೆಯಂತೆ ಆರ್ಯಿಕಾ ಶ್ರೀ 105 ಶಿವಮತಿ ಮಾತಾಜಿ ಉಪಸ್ಥಿತಿಯಲ್ಲಿ ನೆರವೇರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net