ಸೆಬಿ ಮುಖ್ಯಸ್ಥೆ ಮೇಲೆ ಟಿಎಂಸಿ ಸಂಸದೆಯಿಂದ ಲೋಕಪಾಲದಲ್ಲಿ ದೂರು ದಾಖಲು

mohuva
Published on

ನವದೆಹಲಿ: ಸೆಕ್ಯುರಿಟೀಸ್ ಮತ್ತು ಎಕ್ಸ್​ಚೇಂಜ್​ ಬೋರ್ಡ್ ಅಧ್ಯಕ್ಷೆ ಮಾಧವಿ ಪುರಿ ಬುಚ್ಪಿ ವಿರುದ್ಧ ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಲೋಕಪಾಲದಲ್ಲಿ ದೂರು ದಾಖಲಿಸಿದ್ದಾರೆ.

ಮಾಧವಿ ಪುರಿ ಸೆಬಿಯಲ್ಲಿ ಕೆಲಸ ಮಾಡುವಾಗ ಐಸಿಐಸಿಐನಿಂದ ಆದಾಯ ಪಡೆದಿದಿದ್ದಾರೆ. ಲೋಕಪಾಲ್ ದೂರನ್ನು ಪರಿಶೀಲಿಸಿ ಅಕ್ರಮಗಳನ್ನು ಬಯಿಗೆಳೆಯಬೇಕು. ಅಷ್ಟೇ ಅಲ್ಲ, ಸಿಬಿಐ ಅಥವಾ ಇಡಿಯೊಂದಿಗೆ ತನಿಖೆ ಮಾಡುವಂತೆ ನೋಡಿಕೊಳ್ಳಬೇಕು. ಇದರಲ್ಲಿ ಭಾಗಿಯಾಗಿರುವ ಎಲ್ಲರನ್ನೂ ತನಿಖೆಗೆ ಒಳಪಡಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ಇದನ್ನು ಅವರು ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಸೆಬಿಯ ಕುರಿತು ಕಾಂಗ್ರೆಸ್ ಮಾಡಿರುವ ಆರೋಪಗಳ ಬೆನ್ನಲ್ಲೇ ಮಹುವಾ ಮೊಯಿತ್ರಾ ಲೋಕಲ್‌ಪಾಲ್‌ನಲ್ಲಿ ದೂರು ದಾಖಲಿಸಿರುವುದು ಗಮನಾರ್ಹ. ಸೆಬಿ ಮುಖ್ಯಸ್ಥರ ವಿರುದ್ಧದ ಗಂಭೀರ ಆರೋಪಗಳಿಂದಾಗಿ, ಇದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಾಗಿರುವ 10 ಕೋಟಿ ನಾಗರಿಕರ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದ್ದಾರೆ. ಇದನ್ನು ರಾಷ್ಟ್ರೀಯ ಹಿತಾಸಕ್ತಿಯ ವಿಷಯವೆಂದು ಪರಿಗಣಿಸಿ 1988ರ ಕಾಯ್ದೆಯಡಿ ತಕ್ಷಣವೇ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಮಾಧವಿ ಬುಚ್ 2017 ರಿಂದ 2021 ರವರೆಗೆ ಸೆಬಿ ಸದಸ್ಯರಾಗಿದ್ದರು. ಮಾರ್ಚ್ 2022 ರಲ್ಲಿ ಸೆಬಿ ಅಧ್ಯಕ್ಷರಾಗಿ ನೇಮಕಗೊಂಡರು. ಸೆಬಿಗೆ ಸೇರಿದರೂ ಐಸಿಐಸಿಐ ಬ್ಯಾಂಕ್ ಅಧಿಕಾರಿಯಾಗಿ ಸಂಬಳ ಪಡೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net