ಮುಂಬೈ: ಆಹಾರದ ವಿಷಯದಲ್ಲಿ ತುಂಬಾ ಜಾಗರೂಕಳಾಗಿರುತ್ತೇನೆ. ಈ ಹಿಂದೆ ರಿಲೇಷನ್ಷಿಪ್ ನಲ್ಲಿದ್ದ ವ್ಯಕ್ತಿ ಕರಿದ ಆಹಾರವನ್ನು ಆರ್ಡರ್ ಮಾಡಿದ್ದಕ್ಕಾಗಿ ಸಂಬಂಧವನ್ನೇ ಕಳೆದುಕೊಂಡೆ ಎಂದು ‘ಗಿಲ್ಲಿ’ ನಟಿ ರಾಕುಲ್ ಪ್ರೀತ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ವಿಶ್ವದ ಮೊದಲ ಖಾಸಗಿ ಬಾಹ್ಯಾಕಾಶ ನಡಿಗೆ.. 700 ಕಿಮೀ ಎತ್ತರದಲ್ಲಿ ನೌಕೆಯಿಂದ ಹೊರಬಂದ ಇಬ್ಬರು ಗಗನಯಾತ್ರಿಗಳು!
ಜಾಕಿ ಭಗ್ನಾನಿ ನನ್ನ ಜೀವನದಲ್ಲಿ ಬರುವ ಮೊದಲು ನನಗೆ ಸಂಬಂಧಗಳ ಮೌಲ್ಯ ತಿಳಿದಿರಲಿಲ್ಲ. ಹಿಂದೆ ಒಬ್ಬ ವ್ಯಕ್ತಿ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾಗ ಸಣ್ಣ ಕಾರಣಕ್ಕೆ ಆತನನ್ನು ರಿಜೆಕ್ಟ್ ಮಾಡಿದ್ದೆ. ಆತ ಮತ್ತು ನಾನು ಹೋಟೆಲ್‌ಗೆ ಹೋದಾಗ ಅವರು ನನಗೆ ಕರಿದ ಆಹಾರವನ್ನು ಆರ್ಡರ್ ಮಾಡಿದರು. ಅದು ನನಗೆ ಇಷ್ಟವಾಗಲಿಲ್ಲ. ಆಗ ನಾನು ಆರ್ಡರ್ ಮಾಡಿದ ಆಹಾರವನ್ನು ಆತ ಕೀಳಾಗಿ ನೋಡಿದ. ಆಹಾರ ಮತ್ತು ಜೀವನಶೈಲಿಯನ್ನು ಹಂಚಿಕೊಳ್ಳಲಾಗದ ವ್ಯಕ್ತಿ ಅವನೆಂದು ಭಾವಿಸಿದೆ? ಅದಕ್ಕೇ ಬ್ರೇಕಪ್ ಮಾಡಿಕೊಂಡೆ ಎಂದು ಸಂದರ್ಶನವೊಂದರಲ್ಲಿ ನಟಿ ಹೇಳಿಕೊಂಡಿದ್ದಾಳೆ.
ಜಾಕಿ ಭಗ್ನಾನಿ ಭೇಟಿ ನಂತರ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮೌಲ್ಯಗಳ ಅರ್ಥ ನನಗೆ ತಿಳಿದಿದೆ. ನಾನು ಆಹಾರಕ್ಕೆ ವಿಶೇಷ ಗಮನ ಕೊಡುತ್ತೇನೆ. ನಾನು ಅದನ್ನು ತುಂಬಾ ಗೌರವಿಸುತ್ತೇನೆ. ನನಗೆ ಸಣ್ಣ ಆರೋಗ್ಯ ಸಮಸ್ಯೆಗಳು ಬಂದಾಗ ನಾನು ನನ್ನ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುತ್ತೇನೆ. ಹಿತ, ಮಿತ ಆಹಾರ ಸೇವಿಸುತ್ತೇನೆ. ಆರೋಗ್ಯಕ್ಕಾಗಿ ಒಂದು ವರ್ಷ ಸಸ್ಯಾಹಾರ ಮಾತ್ರ ಸೇವಿಸಿದ್ದೇನೆ ಎಂದು ರಾಕುಲ್ ಪ್ರೀತ್ ಸಿಂಗ್ ಹೇಳಿಕೊಂಡಿದ್ದಾಳೆ.
‘ಗಿಲ್ಲಿ’ ಕನ್ನಡ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ರಾಕುಲ್ ಇತ್ತೀಚೆಗಷ್ಟೇ ಹಿಂದಿ ಚಿತ್ರರಂಗದಲ್ಲಿ ದಶಕ ಪೂರೈಸಿದ್ದಾರೆ.ಆಕೆ ಬಾಲಿವುಡ್‌ಗೆ ಎಂಟ್ರಿ ಕೊಡುವ ಸಮಯದಲ್ಲಿ ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿಯನ್ನು ಭೇಟಿಯಾಗಿದ್ದು, ಕಳೆದ ಮೂರು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದು, ಒಟ್ಟಿಗೆ ಜೀವಿಸುತ್ತಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಕಣ್ಣಾಮುಚ್ಚಾಲೆ: ನಿನ್ನೆ ಏರಿಕೆ, ಇಂದು ಸೆನ್ಸೆಕ್ಸ್ 100, ನಿಫ್ಟಿ 40 ಪಾಯಿಂಟ್ ಕುಸಿತ !