ತಿರುಪತಿ ಕಾಲ್ತುಳಿತ ಪ್ರಕರಣ; ತನಿಖೆ ಹಿಂಪಡೆದ ಕೇಂದ್ರ ಸರ್ಕಾರ: ಕಾರಣ ಹೀಗಿದೆ? | Stampede Case

dk (30)
Published on

ಆಂಧ್ರಪ್ರದೇಶ: ತಿರುಪತಿ ತಿರುಮಲ ದೇವಸ್ಥಾನದಲ್ಲಿ ಇದೇ ಜ.8ರಂದು ನಡೆದ ಕಾಲ್ತುಳಿತ ಪ್ರಕರಣಕ್ಕೆ(Stampede Case) ಸಂಬಂಧಪಟ್ಟಂತೆ ಕೇಂದ್ರ ರಚಿಸಿದ್ದ ತನಿಖಾ ತಂಡವನ್ನು ವಿರೋಧದ ಬೆನ್ನಲ್ಲೆ ಕೇಂದ್ರ ಸರ್ಕಾರ ಇದೀಗ ಹಿಂಪಡೆದಿದೆ.

ದೇವಸ್ಥಾನ ಅವರಣದಲ್ಲಿ ಜ.8ರಂದು ನಡೆದ ಕಾಲ್ತುಳಿತ ಪ್ರಕರಣದಲ್ಲಿ 6 ಭಕ್ತರು ಮೃತಪಟ್ಟಿದ್ದರು. ಅಲ್ಲದೆ, ಜ.13ರಂದು ದೇವಸ್ಥಾನದ ತಿರುಪತಿ ಲಡ್ಡು ಕೌಂಟರ್​​ನಲ್ಲಿ ಸಂಭವಿಸಿದ ಆಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿಯೇ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯ ಹೆಚ್ಚುವರಿ ಕಾರ್ಯದರ್ಶಿ ಸಂಜಯ್​​ ಜಿಂದಾಲ್​ ಅವರನ್ನು ನೇಮಕ ಮಾಡ ತನಿಖೆಗೆ ಆದೇಶ ಹೊರಡಿಸಿತ್ತು.

ಆದರೆ, ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ಥಳೀಯ ವಿರೋಧ ಪಕ್ಷಗಳು ಮತ್ತು ಸೋಷಿಯಲ್​​ ಮೀಡಿಯಾದ ವ್ಯಾಪಕ ವಿರೋಧದ ಬೆನ್ನಲ್ಲೆ ಕೇಂದ್ರ ತನ್ನ ತನಿಖೆಯ ನಿರ್ಧಾರವನ್ನು ಹಿಂಪಡೆದಿದೆ.

ಸ್ಥಳೀಯ ಆಡಳಿತ ಸರ್ಕಾರ ಮತ್ತು ಟಿಡಿಪಿ ನಡೆಸುತ್ತಿರುವ ತನಿಖೆಯಲ್ಲಿ ಕೇಂದ್ರ ಸರ್ಕಾರ ಮೂಗು ತೂರಿಸುವ ಕೆಲಸ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿದೆ. ಅಲ್ಲದೆ, ಈ ಹಸ್ತಕ್ಷೇಪದ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಹುಟ್ಟಹಾಕಿತ್ತು.

ಕೇಂದ್ರ ನೇಮಿಸಿದ್ದ ಸಂಜಯ್​​ ಜಿಂದಾಲ್ ನೇತೃತ್ವದ ತನಿಖಾ ತಂಡ ಇಂದು ಅಥವಾ ನಾಳೆ ತಿರುಪತಿಗೆ ಭೇಟಿ ನೀಡಬೇಕಿತ್ತು. ತನಿಖೆ ರದ್ದಾದ ಬಗ್ಗೆ ಟಿಡಿಪಿಗೆ ಕೇಂದ್ರ ಮಾಹಿತಿ ನೀಡಿದೆ ಎಂದು ವರದಿಯಾಗಿದೆ.

ಪ್ರಕರಣದ ಹಿನ್ನೆಲೆ..

ಜನವರಿ 8 ರಂದು, ತಿರುಪತಿಯ ವೈಕುಂಠ ದ್ವಾರ ದರ್ಶನ ಟಿಕೆಟ್ ಕೇಂದ್ರದ ಬಳಿ ಕಾಲ್ತುಳಿತ ಸಂಭವಿಸಿ ಆರು ಜನರು ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡಿದ್ದರು. 10 ದಿನಗಳ ವಿಶೇಷ ದರ್ಶನಕ್ಕಾಗಿ ಟೋಕನ್ ಪಡೆಯಲು ನೆರೆದಿದ್ದ 4,000 ಕ್ಕೂ ಹೆಚ್ಚು ಭಕ್ತರ ಗುಂಪಿನ ನಡುವೆ ಕಾಲ್ತುಳಿತ ಸಂಭವಿಸಿದೆ.

ಮತ್ತೊಂದು ಘಟನೆಯಲ್ಲಿ ತಿರುಮಲ ಲಡ್ಡು ಕೌಂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೌಂಟರ್ ಸಂಖ್ಯೆ 47 ರಲ್ಲಿ ಸಂಭವಿಸಿದ ಬೆಂಕಿಯು ಕಂಪ್ಯೂಟರ್ ಸೆಟಪ್‌ಗೆ ಸಂಪರ್ಕಗೊಂಡಿರುವ ನಿರಂತರ ವಿದ್ಯುತ್ ಸರಬರಾಜು (ಯುಪಿಎಸ್) ವ್ಯವಸ್ಥೆಯಲ್ಲಿನ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net