ಮಹಾಕುಂಭ ಮೇಳದಲ್ಲಿ ಅಗ್ನಿ ನರ್ತನ! ಬೆಂಕಿಯ ಕೆನ್ನಾಲಿಗೆಗೆ ಕಾರು, ಟೆಂಟ್​ಗಳು ಸುಟ್ಟು ಭಸ್ಮ | Fire

ವಿಜಯವಾಣಿ - 2025-01-19T165710.074
Published on

MahaKumbh Mela: ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ದಿಢೀರ್​ ಅಗ್ನಿ ( Fire) ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಟೆಂಟ್​ಗಳು, ಕಾರುಗಳು ಸುಟ್ಟು ಭಸ್ಮವಾಗಿವೆ.

ಟೆಂಟ್​ಗಳಲ್ಲಿನ ಸಿಲಿಂಡರ್​ಗಳು ಬಾಂಬ್​ನಂತೆ ಸ್ಫೋಟಗೊಂಡಿದ್ದೇ ಬೆಂಕಿಗೆ ಕಾರಣ ಎನ್ನಲಾಗಿದೆ. ಸ್ಟೋಟದ ಬೆನ್ನಲ್ಲೇ ವೇಗವಾಗಿ ಬೀಸುತ್ತಿರುವ ಗಾಳಿಯಿಂದ ಬೆಂಕಿ ದಟ್ಟವಾಗಿ ಆವರಿಸಿಕೊಂಡಿದೆ. ವಿವೇಕಾನಂದ ಸೇವಾ ಸಮಿತಿಗೆ ಸೇರಿದ ಟೆಂಟ್​ಗಳು ಬೆಂಕಿಗೆ ಆಹುತಿಯಾಗಿವೆ.

ಕುಂಭಮೇಳದ 18ನೇ ಸೆಕ್ಟರ್​ನಲ್ಲಿರುವ ಟೆಂಟ್​ಗಳಿಗೆ ಬೆಂಕಿ ತಗುಲಿದ್ದು, ಅಗ್ನಿಯ ಜ್ವಾಲೆಗೆ ಟೆಂಟ್​ಗಳು ಸೇರಿದಂತೆ ಕಾರುಗಳು ಸಹ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ 20ಕ್ಕೂ ಹೆಚ್ಚು ಅಗ್ನಿಶಾಮಕ ದಳ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net