Tirupati Laddu Row: ಉದಯನಿಧಿ ಸ್ಟಾಲಿನ್​ಗೆ ಪವನ್ ಎಚ್ಚರಿಕೆ.. ಡಿಎಂಕೆ ಕೌಂಟರ್!

Tirupati Laddu Row: ಉದಯನಿಧಿ ಸ್ಟಾಲಿನ್​ಗೆ ಪವನ್ ಎಚ್ಚರಿಕೆ.. ಡಿಎಂಕೆ ಕೌಂಟರ್
Published on

ತಿರುಪತಿ: ಸನಾತನ ಧರ್ಮ ವೈರಸ್​ ಇದ್ದಂತೆ, ಅದನ್ನು ನಾಶಪಡಿಸಬೇಕು ಎಂದು ತಮಿಳುನಾಡು ಉಪ ಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್​ ಈ ಹಿಂದೆ ಮಾಡಿದ್ದ ಟೀಕೆಗಳಿಗೆ, 'ಇಂಥವರನ್ನು ಏನು ಮಾಡಬೇಕು' ಎಂದು ಆಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್​ ಗುಡುಗಿದ್ದು, ಇದೀಗ ಡಿಎಂಕೆ ಪಕ್ಷ ಅದಕ್ಕೆ ಕೌಂಟರ್​ ಕೊಟ್ಟಿದೆ. Tirupati Laddu Row

'ಸನಾತನ ಧರ್ಮ' ಒಂದು ವೈರಸ್‌ನಂತೆ, ಅದನ್ನು ನೀವು ನಾಶಪಡಿಸುತ್ತೀರಿ ಎಂದು ಘೋಷಿಸಿದ್ದೀರಿ. ಇದನ್ನು ಯಾರು ಹೇಳಿದ್ದರೂ ಅದಕ್ಕೆ ನನ್ನ ಉತ್ತರ ಇದೇ.. ನೀವು 'ಸನಾತನ ಧರ್ಮ'ವನ್ನು ಕೊನೆಗೊಳಿಸಲು ಸಾಧ್ಯವಿಲ್ಲ. ನಾನು 'ಸನಾತನ' ಹಿಂದೂ, ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆ' ಎಂದು ತಿರುಪತಿಯಲ್ಲಿ ಗುರುವಾರ ನಡೆದ ವರಾಹಿ ಸಭೆಯಲ್ಲಿ ಪವನ್ ಕಲ್ಯಾಣ್​ ತಮಿಳಿನಲ್ಲಿಯೇ ಎಚ್ಚರಿಸಿದ್ದರು.

ಈ ನಡುವೆ ಪವನ್​ ಹೇಳಿಕೆಗೆ ಡಿಎಂಕೆ ಪ್ರಬಲ ಕೌಂಟರ್ ನೀಡಿದೆ. ಡಿಎಂಕೆ ವಕ್ತಾರ ಡಾ.ಸೈಯದ್ ಹಫೀಜುಲ್ಲಾ, 'ನಮ್ಮ ಪಕ್ಷವು ಯಾವುದೇ ಧರ್ಮದ ಬಗ್ಗೆ, ವಿಶೇಷವಾಗಿ ಹಿಂದೂ ಧರ್ಮದ ಬಗ್ಗೆ ಮಾತನಾಡುವುದಿಲ್ಲ. ಆದರೆ ಜಾತಿ ತಾರತಮ್ಯ, ಅಸ್ಪೃಶ್ಯತೆ ಮತ್ತು ಜಾತೀಯತೆಯ ವಿರುದ್ಧ ಮಾತನಾಡುವುದನ್ನು ನಿಲ್ಲಿಸುವುದಿಲ್ಲ'. ತಿರುಪತಿ ಲಡ್ಡು ತಯಾರಿಕೆಗೆ ಕಲಬೆರಕೆ ತುಪ್ಪ ಬಳಕೆಯಾಗಿದ್ದರೆ ಎಷ್ಟು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂಬುದು ತಿಳಿದಿಲ್ಲ, ಈ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದ್ದಾರೆ. Tirupati Laddu Row

'ಜನಸೇನಾ ಮತ್ತು ಟಿಡಿಪಿ ನಾಯಕರಾದ ಪವನ್ ಕಲ್ಯಾಣ್, ಚಂದ್ರಬಾಬು ನಾಯ್ಡು ಮತ್ತು ಅವರ ಮಿತ್ರ ಬಿಜೆಪಿ, ಹಿಂದೂ ಧರ್ಮವು ಮಾನವೀಯತೆಯ ನಿಜವಾದ ಶತ್ರುಗಳು' ಎಂದು ಟೀಕಿಸಿದರು. 'ಡಿಎಂಕೆ ಯಾವುದೇ ಧರ್ಮದ ಬಗ್ಗೆ ಮಾತನಾಡುವುದಿಲ್ಲ. ಬಿಜೆಪಿ, ಟಿಡಿಪಿ ಮತ್ತು ಪವನ್ ಕಲ್ಯಾಣ್ ಧರ್ಮ ಮತ್ತು ಹಿಂದೂ ದೇವರುಗಳನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸುತ್ತಾರೆ, ಅವರೇ ನಿಜವಾದ ಶತ್ರುಗಳು. ಪವನ್ ಘೋಷಣೆ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ ಎಂದು ಟೀಕಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸನಾತನ ಧರ್ಮ ಮಲೇರಿಯಾ, ಡೆಂಗ್ಯೂ ಇದ್ದಂತೆ ಅದನ್ನು ನಿರ್ಮೂಲನೆ ಮಾಡಬೇಕು. ಈ ಕಾಮೆಂಟ್‌ಗಳಿಗೆ ದೇಶಾದ್ಯಂತ ಭಾರೀ ಕೋಲಾಹಲ ಎದ್ದಿತ್ತು. ಸುಪ್ರೀಂ ಕೋರ್ಟ್ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ಅವರ ಹೇಳಿಕೆಗಳನ್ನು ತಿರುಚಲಾಗಿದೆ ಮತ್ತು ಸನಾತನ ಧರ್ಮವನ್ನು ಅನುಸರಿಸುವವರನ್ನು ನಿರ್ಮೂಲನೆ ಮಾಡಬೇಕು ಎಂಬ ಟೀಕೆಗೆ ಉತ್ತರ ನೀಡಲು ಪ್ರಯತ್ನಿಸಿದರು. ಸನಾತನ ಧರ್ಮದಲ್ಲಿ ನಂಬಿಕೆ ಇರುವವರನ್ನು ನಿರ್ನಾಮ ಮಾಡುವ ಮಾತನಾಡಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net