Tirupati Laddu Row: ತಿರುಪತಿ ಲಡ್ಡು ವಿವಾದ: ಒಡಿಶಾ ಸರ್ಕಾರದ ಪ್ರಮುಖ ನಿರ್ಧಾರ!

ಪುರಿ ಜಗನ್ನಾಥ ದೇವರ ನೈವೇದ್ಯದಲ್ಲಿ ಬಳಸುವ ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಲು ನಿರ್ಧರಿಸಲಾಗಿದೆ.
Puri Jagannath
Published on

ಭುವನೇಶ್ವರ: ತಿರುಪತಿ ತಿಮ್ಮಪ್ಪ ಪ್ರಸಾದ ಲಡ್ಡು(Tirupati Laddu Row) ತಯಾರಿಕೆಯಲ್ಲಿ ಕಲಬೆರಕೆ ತುಪ್ಪವನ್ನು ಬಳಸಿದ ಕುರಿತು ವರದಿಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಎಚ್ಚೆತ್ತುಕೊಂಡಿದೆ. ವಿಶ್ವವಿಖ್ಯಾತ ಪುರಿ ಜಗನ್ನಾಥ ದೇವರ ನೈವೇದ್ಯದಲ್ಲಿ ಬಳಸುವ ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಲು ನಿರ್ಧರಿಸಲಾಗಿದೆ. ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ ಶಂಕರ್ ಸ್ವೈನ್ ಬುಧವಾರ ಪುರಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದರು.

12ನೇ ಶತಮಾನದಿಂದಲೂ ಜಗನ್ನಾಥನಿಗೆ ವಿವಿಧ ರೂಪಗಳಲ್ಲಿ ನೈವೇದ್ಯ ಅರ್ಪಿಸಲಾಗುತ್ತಿದೆ. ಆದರೆ ಯಾವುದೇ ಟೀಕೆ ಇಲ್ಲ. ಒಡಿಶಾ ಮಿಲ್ಕ್ ಫೆಡರೇಶನ್ ಉತ್ಪಾದಿಸುವ ತುಪ್ಪವನ್ನು ಜಗನ್ನಾಥ ಪ್ರಸಾದ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಅನುಮಾನ ನಿವಾರಣೆಗಾಗಿಯೇ ಈ ತುಪ್ಪದ ಗುಣಮಟ್ಟ ಪರೀಕ್ಷಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕಲಬೆರಕೆ ತುಪ್ಪ:

Tirupati Laddu Row ಈ ಹಿಂದೆ ದೇವಸ್ಥಾನದ ಆವರಣದಲ್ಲಿ ದೀಪಗಳನ್ನು ಬೆಳಗಿಸಲು ಕಲಬೆರಕೆ ತುಪ್ಪವನ್ನು ಬಳಸಿರುವುದು ಕಂಡುಬಂದಿತ್ತು. ಬಳಿಕ ದೇವಸ್ಥಾನದ ಅಧಿಕಾರಿಗಳು ತುಪ್ಪ ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಭಕ್ತರ ನಂಬಿಕೆಯೇ ಅವರಿಗೆ ಮುಖ್ಯ ಎಂದು ಈ ಸಂದರ್ಭದಲ್ಲಿ ಅವರು ನೆನಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net