ಅಂಬಾನಿ ಪುತ್ರನ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಲ್ಯಾಪ್​ಟಾಪ್​, ನಗದು ದರೋಡೆ: ಐವರು ಬಂಧನ !

ambani
Published on

ನವದೆಹಲಿ: ಫೆಬ್ರವರಿ 12 ರಂದು ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಅವರ ವಿವಾಹಪೂರ್ವ ಸಂಭ್ರಮಾಚರಣೆಯಲ್ಲಿ ನಗದು ಮತ್ತು ಲ್ಯಾಪ್‌ಟಾಪ್ ಕಳ್ಳತನದಲ್ಲಿ ಭಾಗಿಯಾಗಿದ್ದ ಆರೋಪದ ಐವರು ದರೋಡೆಕೋರರನ್ನು ಗುಜರಾತ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಸಿಸಿಟಿವಿ ಆಧಾರದ ಮೇಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣ ತನಿಖೆ ವೇಳೆ ಐವರ ಹೆಸರು ಬಹಿರಂಗವಾಗಿದೆ. ದೆಹಲಿಯಲ್ಲಿ ನಡೆದ ಕಾರ್ಯಚರಣೆಯಲ್ಲಿ ಜಗನ್​, ದೀಪಕ್​, ಗುಣಶೇಖರ್ ಮತ್ತು ಏಕಾಂಬರಂ ಅವರನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ತಮಿಳುನಾಡಿನ ತಿರುಚಿರಾಪಳ್ಳಿಯ ರಾಮ್​ಜಿ ನಗರದ ನಿವಾಸಿಗಳು ಎನ್ನಲಾಗಿದೆ.

ತಿರುಚ್ಚಿ ಜಿಲ್ಲೆಯ ರಾಮ್‌ಜಿ ನಗರದ ಐವರು ರಾಜ್‌ಕೋಟ್‌ನಲ್ಲಿ ನಡೆದ ಮದುವೆಯ ಪೂರ್ವ ಕಾರ್ಯಕ್ರಮದ ಸ್ಥಳದಲ್ಲಿ ನಿಲ್ಲಿಸಿದ್ದ ಮರ್ಸಿಡಿಸ್ ಕಾರಿನ ಕಿಟಕಿ ಒಡೆದು 10 ಲಕ್ಷ ರೂ. ಮತ್ತು ಲ್ಯಾಪ್‌ಟಾಪ್ ಅನ್ನು ಕದ್ದಿದ್ದಾರೆ ಎಂದು ಪೊಲೀಸ್ ವರದಿ ತಿಳಿಸಿದೆ. ಪೊಲೀಸರು ಕಣ್ಗಾವಲು ಕ್ಯಾಮೆರಾದ ದಾಖಲೆಗಳನ್ನು ವಿಶ್ಲೇಷಿಸಿ ಆರೋಪಿಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ 4 ತಿಂಗಳಲ್ಲಿ ರಾಜ್‌ಕೋಟ್, ಜಾಮ್‌ನಗರ, ಅಹಮದಾಬಾದ್ ಮತ್ತು ದೆಹಲಿಯ 11 ಸ್ಥಳಗಳಲ್ಲಿ ಕಳ್ಳತನ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಆರೋಪಿಗಳು ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net