ಎಷ್ಟೇ ಕೇಳಿಕೊಂಡರೂ ಗಂಡ ನನ್ನೊಂದಿಗೆ ಜೀವನ ನಡೆಸುತ್ತಿಲ್ಲ; ಮನನೊಂದು ಪ್ರಾಣ ಬಿಟ್ಟ ಪತ್ನಿ!

Suside
Published on

ವಿಜಯನಗರ: ಗಂಡನಿಂದ ಮಾನಸಿಕ ಹಾಗೂ ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ನಡೆದಿದೆ. 33 ವರ್ಷದ ರೂಪ(ಬಸಮ್ಮ) ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯಗೆ ಶರಣಾಗಿರುವ ಮಹಿಳೆ.

ನಾನು, ನನ್ನ ಗಂಡನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಪರಿಪರಿಯಾಗಿ ಕೇಳಿಕೊಂಡರೂ, ನನ್ನ ಜೊತೆಗೆ ಜೀವನ ನಡೆಸುತ್ತಿಲ್ಲ. ಆತ್ಮಹತ್ಯೆ ಮಹಾಪಾಪ ಎಂಬುದು ಗೊತ್ತಿದೆ. ಆದರೂ ಅನಿವಾರ್ಯವಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಡೆತ್​ನೋಟ್ ಬರೆದಿಟ್ಟು ರೂಪ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದೀಗ ಮೃತಳ ತಾಯಿ ನೀಡಿದ ದೂರಿನಂತೆ ಪತಿ ಅರ್ಜುನ್ ಪರಶೆಟ್ಟಿ ಮತ್ತು ಅವರ ಕುಟುಂಬಸ್ಥರ ಮೇಲೆ ಹೂವಿನ ಹಡಗಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net