

ಉತ್ತರಾಖಂಡ: ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಹೋಮ್ ಗಾರ್ಡ್‌ನ ಬುದ್ಧಿವಂತಿಕೆ ಮತ್ತು ತಿಳುವಳಿಕೆಯಿಂದಾಗಿ ದೆಹಲಿ ವ್ಯಕ್ತಿಯ ಜೀವ ಉಳಿದಿದೆ. ಉತ್ತರಾಖಂಡದ ಡಿಜಿಪಿ ಐಪಿಎಸ್ ಅಶೋಕ್ ಕುಮಾರ್ ಅವರು ಈ ವಿಡಿಯೋವನ್ನು ಶೇರ್ ಮಾಡುವ ಮೂಲಕ ಕಾನ್‌ಸ್ಟೆಬಲ್ ಮತ್ತು ಗೃಹ ರಕ್ಷಕರನ್ನು ಶ್ಲಾಘಿಸಿದ್ದಾರೆ.
ಡಿಜಿಪಿ ಅಶೋಕ್ ಕುಮಾರ್ ಅವರ ಪೋಸ್ಟ್ ಪ್ರಕಾರ, ದೆಹಲಿಯಿಂದ ತೆಹ್ರಿ ಗರ್ವಾಲ್ ತಲುಪಿದ ವ್ಯಕ್ತಿಯೊಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹಠಾತ್ ಎದೆಯಲ್ಲಿ ನೋವು ಕಾಣಿಸಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಪೇದೆ ಸಂಜಯ್ ಕುಮಾರ್ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಸುರೇಶ್, ಅವರ ಸ್ಥಿತಿ ನೋಡಿ ತಕ್ಷಣ ಸಿಪಿಆರ್ ನೀಡುವ ಮೂಲಕ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ಇದಾದ ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿತ್ತು.
ಎಕ್ಸ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡ ಡಿಜಿಪಿ ಅಶೋಕ್ ಕುಮಾರ್, "ತೆಹ್ರಿ ಗರ್ವಾಲ್‌ನಲ್ಲಿ ಕಾನ್‌ಸ್ಟೆಬಲ್ ಸಂಜಯ್ ಕುಮಾರ್ ಮತ್ತು ಹೋಮ್ ಗಾರ್ಡ್ ಸುರೇಶ್ ಅವರ ಬುದ್ಧಿವಂತಿಕೆಯಿಂದಾಗಿ ಓರ್ವ ವ್ಯಕ್ತಿಯ ಜೀವ ಉಳಿಸಲಾಗಿದೆ. ದೆಹಲಿಯ 45 ವರ್ಷದ ವ್ಯಕ್ತಿಯೊಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಭದ್ರಕಾಳಿ ಪೋಸ್ಟ್ ಬಳಿ ಎದೆನೋವಿನಿಂದ ಅವರು ಇದ್ದಕ್ಕಿದ್ದಂತೆ ಪ್ರಜ್ಞಾಹೀನರಾದರು. ಕಾನ್ಸ್‌ಟೇಬಲ್ ಸಂಜಯ್‌ಕುಮಾರ್ ಮತ್ತು ಗೃಹ ರಕ್ಷಕ ಸುರೇಶ್ ಅವರನ್ನು ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ನೋಡಿದ ತಕ್ಷಣ ಅವರ ಸಹಾಯಕ್ಕೆ ಬಂದರು'' ಎಂದು ಟ್ವೀಟ್ ಮಾಡಿದ್ದಾರೆ.
ಸಿಪಿಆರ್ ನೀಡುವ ಮೂಲಕ ವ್ಯಕ್ತಿಯ ಜೀವ ಉಳಿಸಲಾಗಿದೆ. ನಂತರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿಂದ ಚೇತರಿಸಿಕೊಂಡ ನಂತರ ಅವರು ತಮ್ಮ ಗಮ್ಯಸ್ಥಾನಕ್ಕೆ ತೆರಳಿದರು.