

ಮುಂಬೈ: ದೇಶದೆಲ್ಲೆಡೆ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಅನೇಕ ಬಾಲಿವುಡ್ ತಾರೆಯರು ಸಹ ತಮ್ಮ ಮನೆಗೆ ಗಣಪನನ್ನು ಬಹಳ ವಿಜೃಂಭಣೆಯಿಂದ ಸ್ವಾಗತಿಸಿದರು. ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆಯಲ್ಲಿಯೂ ಗಣಪತಿಯನ್ನು ಪ್ರತಿಷ್ಠಾಪಿಸಿದ್ದರು. ಅನೇಕ ತಾರೆಯರು ಬಪ್ಪನ ದರ್ಶನಕ್ಕಾಗಿ ಅವರ ಮನೆ 'ಆಂಟಿಲಿಯಾ'ಗೆ ತೆರಳಿದರು. ಈ ವಿಶೇಷ ಸಂದರ್ಭದಲ್ಲಿ, ಎಲ್ಲಾ ಸ್ಟಾರ್‌ಗಳು ಸಾಂಪ್ರದಾಯಿಕ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಬಳಕೆದಾರರು ದಿಶಾ ಪಟಾನಿ ಅವರ ಲುಕ್ ನೋಡಿ ಕೋಪಗೊಂಡಿದ್ದಾರೆ.
ಮುಕೇಶ್ ಅಂಬಾನಿ-ನೀತಾ ಅಂಬಾನಿ ಮನೆಯಲ್ಲಿ ಸ್ಟಾರ್‌ಗಳು ತಮ್ಮ ಲುಕ್ನಿಂದ ಸಾಕಷ್ಟು ಗಮನ ಸೆಳೆದರು. ಆದರೆ ನಟಿ ದಿಶಾ ಪಟಾನಿ ಅವರ ಲುಕ್ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರಿಗೆ ಇಷ್ಟವಾಗುತ್ತಿಲ್ಲ. ಗಣಪತಿ ಬಪ್ಪಾ ಆರತಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ದಿಶಾ, ಈ ವಿಶೇಷ ಸಂದರ್ಭಕ್ಕಾಗಿ ಪೀಚ್ ಬಣ್ಣದ ಸೀರೆಯನ್ನು ಆರಿಸಿಕೊಂಡಿದ್ದರು. ಇದರೊಂದಿಗೆ ಅವರು ಬಿಕಿನಿ ಕುಪ್ಪಸವನ್ನು ಧರಿಸಿದ್ದರು.
ದಿಶಾ ಸೀರೆಯನ್ನು ಉಟ್ಟಿದ್ದಕ್ಕಿಂತ ಅವರ ಬಿಕಿನಿ ಬ್ಲೌಸ್ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಗಣಪತಿ ಹಬ್ಬದಂದು ಪೂಜೆಯ ವೇಳೆ ಸೀರೆ ಉಟ್ಟ ಆಕೆಯ ರೀತಿ ಸೋಷಿಯಲ್ ಮೀಡಿಯಾದಲ್ಲಿ ಬಳಕೆದಾರರ ಕಣ್ಣು ಕೆರಳಿಸುತ್ತಿದೆ. ಇದರಿಂದಾಗಿ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ.
ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ...
ದಿಶಾ ಪಟಾನಿ ಮತ್ತು ಮೌನಿ ರಾಯ್ ಮಾಧ್ಯಮದ ಕ್ಯಾಮೆರಾಗಳಿಗೆ ನೀಡಿದ ಪೋಸ್ ಎಲ್ಲರ ಹುಬ್ಬೇರುವಂತೆ ಮಾಡಿದೆ. ಒಂದು ಕಡೆ ಮೌನಿ ರಾಯ್ ತನ್ನ ಸಾಂಪ್ರದಾಯಿಕ ಶೈಲಿಯಲ್ಲಿ ಸರಳವಾದ ಗುಲಾಬಿ ಬಣ್ಣದ ಸೀರೆಯೊಂದಿಗೆ ತನ್ನ ಅಭಿಮಾನಿಗಳನ್ನು ಆಕರ್ಷಿಸಿದರೆ, ಇನ್ನೊಂದು ಕಡೆ ದಿಶಾ ತನ್ನ ಲುಕ್ನಿಂದಾಗಿ ಟ್ರೋಲ್ ಆದರು.
ನೆಟ್ಟಿಗರು "ಇಂತಹ ಸಾಂಪ್ರದಾಯಿಕ ಸಮಾರಂಭದಲ್ಲಿ ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು ಎಂಬುದನ್ನು ದಿಶಾ ಎಂದಾದರೂ ಅರ್ಥಮಾಡಿಕೊಳ್ಳುತ್ತಾರೆಯೇ?", "ಗಣೇಶ ಚತುರ್ಥಿಯಂತಹ ಸಂದರ್ಭಗಳಲ್ಲಿ, ದಿಶಾ ಪಟಾನಿ ಬಿಕಿನಿ ತರಹದ ಬಟ್ಟೆಗಳನ್ನು ಧರಿಸಬೇಕಿತ್ತಾ'', "ದಿಶಾ ನಾವು ಭಾರತದಲ್ಲಿ ವಾಸಿಸುತ್ತಿದ್ದೇವೆ, ಇಂತಹ ವಿಶೇಷ ಸಂದರ್ಭಗಳಲ್ಲಿ ಹೊರಗಿನ ಜನರು ಸಹ ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತಾರೆ'' ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.