

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಿಲಿಂಡರ್‌ನಿಂದ ಅಡುಗೆ ಅನಿಲ ಸೋರಿಕೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ ಮತ್ತು ಮಗುವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ವೈಟ್‌ಫೀಲ್ಡ್ ಬಳಿಯ ನಾಗೊಂಡನಹಳ್ಳಿಯಲ್ಲಿ ಅಪಾರ್ಟ್‌ನಲ್ಲಿ ಬುಧವಾರ ಈ ಘಟನೆ ನಡೆದಿದೆ.
ನಾಗೊಂಡನಹಳ್ಳಿಯ ಶ್ರೀನಿಧಿ ಆಲ್ಪೈನ್ ಅಪಾರ್ಟ್‌ಮೆಂಟ್ ನಿವಾಸಿ ಪ್ರಭು ಎಂಬುವರ ಪತ್ನಿ ತಮಿಳು ಸೆಲ್ವಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದು, ಅಗ್ನಿಶಾಮಕ ದಳ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ತಾಯಿ ಮಗ ಪಾರಾಗಿದ್ದಾರೆ.
ಪ್ರಭು ಮತ್ತು ತಮಿಳು ಸೆಲ್ವಿ ದಂಪತಿ ಮಧ್ಯೆ ಆಗಾಗ್ಗೆ ಜಗಳವಾಗುತ್ತಿತ್ತು. ಕೌಟುಂಬಿಕ ಕಲಹದಿಂದ ಮನನೊಂದಿದ್ದ ತಮಿಳು ಸೆಲ್ವಿ ಅವರು ಪತಿ ಬೆಳಗ್ಗೆ ಹೊರಗೆ ಹೋಗಿದ್ದಾಗ ೯ ಗಂಟೆಯ ಸುಮಾರಿಗೆ ್ಲ್ಯಾಟ್‌ನ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿಕೊಂಡು, ಸಿಲಿಂಡರ್‌ನಿಂದ ಅಡುಗೆ ಅನಿಲವನ್ನು ಸಂಪೂರ್ಣವಾಗಿ ಹೊರ ಬಿಟ್ಟಿದ್ದಾರೆ. ಅದೇ ವೇಳೆಗೆ ್ಲ್ಯಾಟ್‌ಗೆ ಹಿಂದಿರುಗಿದ ಪ್ರಭು, ಬೆಲ್ ಮಾಡಿದರೂ ತಮಿಳು ಸೆಲ್ವಿ ಬಾಗಿಲು ತೆರೆದಿಲ್ಲ. ಇದರಿಂದ ಅನುಮಾನಗೊಂಡ ಪ್ರಭು, ್ಲ್ಯಾಟ್‌ನ ಕಿಟಕಿ ಬಳಿ ಹೋದಾಗ ಒಳಗಿನಿಂದ ಗ್ಯಾಸ್‌ನ ವಾಸನೆ ಬಂದಿದೆ. ಆಗ ತಮಿಳು ಸೆಲ್ವಿ, ಬೆಂಕಿ ಹಚ್ಚಿಕೊಂಡು ಮಗನ ಜತೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತಿಗೆ ಬೆದರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಭು, ಆತ್ಮಹತ್ಯೆ ಮಾಡಿಕೊಳ್ಳದಂತೆ ಪತ್ನಿಯ ಮನವೊಲಿಸಲು ಸಾಕಷ್ಟು ಪ್ರಯತ್ನ ಮಾಡಿದರೂ ತಮಿಳು ಸೆಲ್ವಿ ಬಾಗಿಲು ತೆರೆಯಲು ಒಪ್ಪಿಲ್ಲ. ಇದರಿಂದ ದಿಕ್ಕು ತೋಚದಂತಾದ ಪ್ರಭು ಅವರು ಪೊಲೀಸ್ ಮತ್ತು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಯು ್ಲ್ಯಾಟ್‌ನ ಬಾಗಿಲು ಒಡೆದು ಒಳ ಹೋಗಿ ತಮಿಳು ಸೆಲ್ವಿ ಹಾಗೂ ಅವರ ಐದು ವರ್ಷದ ಮಗನನ್ನು ರಕ್ಷಿಸಿದ್ದಾರೆ.
ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ:
ಅಗ್ನಿಶಾಮಕ ದಳ ಸಿಬ್ಬಂದಿ ್ಲ್ಯಾಟ್‌ನ ಒಳ ಹೋದಾಗ ಕೈಯಲ್ಲಿ ಬೆಂಕಿ ಪೊಟ್ಟಣ ಹಿಡಿದೇ ಇದ್ದ ತಮಿಳು ಸೆಲ್ವಿ, ಬೆಂಕಿ ಹಚ್ಚುವುದಾಗಿ ಬೆದರಿಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿಯು ತಮಿಳು ಸೆಲ್ವಿಯವರ ಕೈಗಳನ್ನು ಬಿಗಿಯಾಗಿ ಹಿಡಿದು ಹೊರಗೆ ಎಳೆದುಕೊಂಡು ಬಂದು ಅನಾಹುತ ತಪ್ಪಿಸಿದ್ದಾರೆ. ಪ್ರಭು, ಸ್‌ಟಾವೇರ್ ಇಂಜಿನಿಯರ್ ಆಗಿದ್ದಾರೆ. ತಮಿಳು ಸೆಲ್ವಿ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಗೊತ್ತಾಗಿದೆ. ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.