

ಬೆಳ್ತಂಗಡಿ(ದ.ಕ.): ಧರ್ಮಸ್ಥಳ ಪ್ರಕರಣದ ದೂರುದಾರ ಚಿನ್ನಯ್ಯನಿಗೆ ಆಶ್ರಯ ನೀಡಿದ್ದ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮನೆ ಮೇಲೆ ಎಸ್ಐಟಿ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದಾಳಿ ನಡೆಸಿ ಪರಿಶೀಲಿಸಿದರು. ದಿನವಿಡೀ ನಡೆದ ಪರಿಶೀಲನೆಯಲ್ಲಿ ಚಿನ್ನಯ್ಯ ಬಳಸುತ್ತಿದ್ದ ಮೊಬೈಲ್, ತಿಮರೋಡಿ ಸಹೋದರರ ಮನೆಯ ಸಿಸಿ ಕ್ಯಾಮರಾ ಹಾರ್ಡ್ ಡಿಸ್ಕ್ಗಳನ್ನು ಎಸ್ಐಟಿ ವಶಕ್ಕೆ ಪಡೆದಿದೆ. ಧರ್ಮಸ್ಥಳದಲ್ಲಿ ಜುಲೈ 29ರಿಂದ ಶವಗಳ ಅವಶೇಷಗಳಿಗೆ ಶೋಧ ಆರಂಭಗೊಂಡಿತ್ತು.
ಪ್ರತಿದಿನ ಶೋಧ ಮುಗಿದ ಬಳಿಕ ಚಿನ್ನಯ್ಯ, ತಿಮರೋಡಿ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದ. ಮೊಬೈಲ್ ಫೋನ್ ಅನ್ನು ಅಲ್ಲಿಯೇ ಇರಿಸಲಾಗಿತ್ತು ಎಂದು ತನಿಖೆ ಸಂದರ್ಭ ಚಿನ್ನಯ್ಯ ಬಾಯಿ ಬಿಟ್ಟಿದ್ದ. ಗಿರೀಶ್ ಮಟ್ಟಣ್ಣನವರ್ ಅನೇಕ ಬಾರಿ ತಿಮರೋಡಿ ನಿವಾಸಕ್ಕೆ ಬಂದು ಹೋಗಿದ್ದರು. ತಿಮರೋಡಿ ನಿವಾಸದಲ್ಲೇ ಸುದ್ದಿಗೋಷ್ಠಿ ನಡೆಸಿ, ದೂರುದಾರನ ಜತೆ ನಾವಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಸುಜಾತಾ ಭಟ್ ಕೆಲದಿನಗಳ ಹಿಂದೆ ನಿವಾಸಕ್ಕೆ ಭೇಟಿ ನೀಡಿದ್ದರು ಎಂಬ ಮಾಹಿತಿ ಎಸ್ಐಟಿಗೆ ಸಿಕ್ಕಿದೆ. ಧರ್ಮಸ್ಥಳದಲ್ಲಿ ಶೋಧ ಆರಂಭಕ್ಕೂ ಮುನ್ನ ಚಿನ್ನಯ್ಯ ಅನೇಕ ಯೂಟ್ಯೂಬ್ ಚಾನೆಲ್ಗಳಿಗೆ ಸಂದರ್ಶನ ನೀಡಿದ್ದ. ಇದನ್ನು ಚಿನ್ನಯ್ಯ ಬಂಧನ ಬಳಿಕ ಬಿತ್ತರಿಸಲಾಗಿದೆ. ಈ ಎಲ್ಲ ಸಂದರ್ಶನಗಳು ತಿಮರೋಡಿ ಮನೆಯಲ್ಲಿ ನಡೆದಿವೆ ಎಂಬ ನಿಟ್ಟಿನಲ್ಲೂ ತನಿಖೆ ನಡೆಸುತ್ತಿದೆ. ಅಧಿಕಾರಿಗಳು ಚಿನ್ನಯ್ಯನನ್ನು ಕರೆದುಕೊಂಡು ತೆರಳುವ ಮುನ್ನವೇ ಉಜಿರೆ ಪೇಟೆ ಮತ್ತು ತಿಮರೋಡಿ ನಿವಾಸದ ಸುತ್ತಮುತ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಾಧ್ಯಮದವರನ್ನು ಎರಡು ಕಿ.ಮೀ. ದೂರದಲ್ಲೇ ತಡೆಯಲಾಗಿತ್ತು. ತನಿಖೆ ಸಂದರ್ಭ ತಿಮರೋಡಿ ಮನೆಯಲ್ಲಿ ಇರಲಿಲ್ಲ. ಕುಟುಂಬದ ಮಹಿಳಾ ಸದಸ್ಯರಿಗೆ ಸರ್ಚ್ ವಾರಂಟ್ ತೋರಿಸಿ ಅಧಿಕಾರಿಗಳು ಶೋಧ ಆರಂಭಿಸಿದರು. ಸಮೀಪದಲ್ಲಿರುವ ತಿಮರೋಡಿ ಸಹೋದರ ಮೋಹನ್ ಕುಮಾರ್ ಶೆಟ್ಟಿ ಮನೆಗೂ ಅಧಿಕಾರಿಗಳ ತಂಡ ಭೇಟಿ ನೀಡಿತ್ತು.
ದೂರುಗಳು ವರ್ಗ: ಗಿರೀಶ್ ಮಟ್ಟಣ್ಣವರ್, ಯೂಟ್ಯೂಬರ್ ಮೇಲೆ ಹುಬ್ಬಳ್ಳಿ, ಧಾರವಾಡದಲ್ಲಿ ದಾಖಲಾಗಿದ್ದ ದೂರುಗಳನ್ನು ಬೆಳ್ತಂಗಡಿ ಠಾಣೆಗೆ ವರ್ಗಾಯಿಸ ಲಾಗಿದೆ. ಉಜಿರೆಯಲ್ಲಿ ಗಿರೀಶ್ ಮಟ್ಟಣ್ಣವರ್ ಯೂಟ್ಯೂಬ್ ಚಾನಲ್ ಒಂದರಲ್ಲಿ ಜೈನ ಧರ್ಮಕ್ಕೆ ಅಪಮಾನವಾಗುವ ರೀತಿಯಲ್ಲಿ ಮಾತನಾಡಿದ್ದರು. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಮತ್ತು ಧಾರವಾಡ ಗ್ರಾಮೀಣ ಠಾಣೆಗೆ ದೂರು ನೀಡಲಾಗಿತ್ತು.
ಸತ್ಯಾಂಶ ಹೊರ ತೆಗೆಯಲು ಎಸ್ಐಟಿ ರಚನೆ ಬೆಂಗಳೂರು: ಧರ್ಮಸ್ಥಳ ತಲೆ ಬುರುಡೆ ಆರೋಪ ಪ್ರಕರಣದಲ್ಲಿ ಸತ್ಯಾಂಶ ಹೊರ ತರಬೇಕೆಂದು ಎಸ್ಐಟಿ ರಚನೆ ಮಾಡಿದ್ದು, ಪರ-ವಿರೋಧ ಎಂಬುದು ಇಲ್ಲವೆಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದರು. ಎಸ್ಐಟಿ ಅಧಿಕಾರಿಗಳು ಗಂಭೀರವಾಗಿ ತನಿಖೆ ನಡೆಸುತ್ತಿದ್ದು, ಸತ್ಯಾಂಶವನ್ನು ಜನರ ಮುಂದಿಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ವರದಿ ಬರುವ ಮೊದಲೇ ಎನ್ಐಎಗೆ ವರ್ಗಾವಣೆ ಮಾಡಬೇಕೆಂಬುದು ಸರಿಯಲ್ಲ. ವರದಿ ಬಂದ ಮೇಲೆ ಪರ-ವಿರೊಧ ಚರ್ಚೆ ಆಗುತ್ತದೆ. ನಂತರ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪರಮೇಶ್ವರ ಸ್ಪಷ್ಟಪಡಿಸಿದರು.
ಬೆಂಗಳೂರು: ಧರ್ಮಸ್ಥಳ ತಲೆ ಬುರುಡೆ ಆರೋಪ ಪ್ರಕರಣದಲ್ಲಿ ಸತ್ಯಾಂಶ ಹೊರ ತರಬೇಕೆಂದು ಎಸ್ಐಟಿ ರಚನೆ ಮಾಡಿದ್ದು, ಪರ-ವಿರೋಧ ಎಂಬುದು ಇಲ್ಲವೆಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದರು. ಎಸ್ಐಟಿ ಅಧಿಕಾರಿಗಳು ಗಂಭೀರವಾಗಿ ತನಿಖೆ ನಡೆಸುತ್ತಿದ್ದು, ಸತ್ಯಾಂಶವನ್ನು ಜನರ ಮುಂದಿಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ವರದಿ ಬರುವ ಮೊದಲೇ ಎನ್ಐಎಗೆ ವರ್ಗಾವಣೆ ಮಾಡಬೇಕೆಂಬುದು ಸರಿಯಲ್ಲ. ವರದಿ ಬಂದ ಮೇಲೆ ಪರ-ವಿರೊಧ ಚರ್ಚೆ ಆಗುತ್ತದೆ. ನಂತರ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪರಮೇಶ್ವರ ಸ್ಪಷ್ಟಪಡಿಸಿದರು.
ಬೆಳ್ತಂಗಡಿ(ದ.ಕ.): ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಹೇಳಿಕೆ ನೀಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ವಸಂತ ಗಿಳಿಯಾರ್ ವಿರುದ್ಧ ಸಿಪಿಐಎಂ ಮುಖಂಡ ಶೇಖರ್ ಲಾೖಲ ಹಾಗೂ ಕ್ರೖೆಸ್ತ ಧರ್ಮದ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಕ್ರೖೆಸ್ತ ಮುಖಂಡರು ಮಂಗಳವಾರ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.