ಬೆಂಕಿಯಿಂದ ಬಾಣಲೆಗೆ ! : ದೆಹಲಿಯಲ್ಲಿ ಅನುಭವಿಸಿದ ಹಿಂಸೆಯ ಕರಾಳತೆ ಬಿಚ್ಚಿಟ್ಟ ತಿಲೋತ್ತಮಾ

tillottame 2
Published on

ಬೆಂಗಾಲಿ, ಹಿಂದಿ, ಮರಾಠಿ ಹಾಗೂ ಇಂಗ್ಲಿಷ್‌ನಲ್ಲಿ ಹಲವು ಕಿರುಚಿತ್ರ, ವೆಬ್ ಸರಣಿ ಹಾಗೂ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿ ನಟಿ ತಿಲೋತ್ತಮಾ ಶೋಮ್‌ಗೆ ಸಲ್ಲುತ್ತದೆ. 2018ರ ‘ಸರ್’ ಚಿತ್ರದ ನಟನೆಗೆ ಶೋಮ್ ‘ಫಿಲ್‌ಮ್ೇರ್ ಉತ್ತಮ ನಟಿ’ ಪ್ರಶಸ್ತಿ ಪಡೆದಿದ್ದರು. ಸದ್ಯ ವೆಬ್ ಸಿರೀಸ್‌ಗಳಲ್ಲಿ ಬಿಜಿಯಾಗಿರುವ ಅವರು, ಇತ್ತೀಚೆಗಷ್ಟೆ ದೆಹಲಿಯಲ್ಲಿ ಅನುಭವಿಸಿದ ಹಿಂಸೆಯೊಂದರ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ.

ದೆಹಲಿಯಲ್ಲಿ ಬಸ್‌ಗಾಗಿ ಕಾಯುತ್ತಿರುವಾಗ ಅಕಸ್ಮಾತ್ ಆಗಿ ಕಾರಿಗೆ ಡ್ರಾಪ್ ಕೇಳಿದಾಗ ಅವರಿಂದ ಪಟ್ಟ ಹಿಂಸೆಯ ಬಗ್ಗೆ ತಿಳಿಸಿದ್ದಾರೆ. ‘ಬಸ್‌ಗಾಗಿ ಕಾಯುತ್ತಿರುವಾಗ ನನ್ನ ಬಳಿ ಒಂದು ಕಾರು ಬಂದು ನಿಂತಿತು. ಕೆಳಗಿಳಿದು ಬಂದ ನಾಲ್ಕೈದು ಮಂದಿ ಪುಂಡರು ಅಶ್ಲೀಲವಾಗಿ ಮಾತನಾಡುತ್ತಾ, ಕಲ್ಲು ಎಸೆಯತೊಡಗಿದರು. ನಾನು ಓಡಿ ಹೋದರೆ, ಅವರು ಹಿಂಬಾಲಿಸಬಹುದು ಎಂದು ನಡುರಸ್ತೆಯಲ್ಲೇ ನಿಂತು, ಕಾರುಗಳಿಗೆ ಡ್ರಾಪ್ ಕೇಳತೊಡಗಿದೆ. ಸುಮಾರು ಹೊತ್ತಿನ ಬಳಿಕ ಡಾಕ್ಟರ್ ಚಿಹ್ನೆಯುಳ್ಳ ಕಾರೊಂದು ನಿಲ್ಲಿಸಿತು. ಆಗ ಅಬ್ಬಾ ನಾನು ಬಚಾವಾದೆ ಅಂತನ್ನಿಸಿ, ಹೋಗಿ ಕಾರಿನಲ್ಲಿ ಕುಳಿತೆ. ಆದರೆ, ಆಗ ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವವಾಯಿತು. ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ನನ್ನ ಜತೆ ಆ ವ್ಯಕ್ತಿ ಇನ್ನೂ ಕೆಟ್ಟದಾಗಿ ನಡೆದುಕೊಂಡ. ನಾನು ಆತನ ಮೇಲೆ ಕೂಗಾಡಿ, ಕಿರುಚಾಡಿ ಹೊಡೆಯಲು ಮುಂದಾದೆ. ಆತ ಕಾರು ನಿಲ್ಲಿಸಬೇಕಾಯಿತು. ತಕ್ಷಣ ನಾನು ಕಾರಿನಿಂದ ಇಳಿದು ಪಾರಾದೆ’ ಎಂದು ಕೇವಲ ಅರ್ಧ ತಾಸಿನಲ್ಲಿ ತಮಗಾದ ಎರಡು ಕೆಟ್ಟ ಅನುಭವಗಳ ಬಗ್ಗೆ ಹೇಳಿಕೊಂಡಿದ್ದಾರೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net