

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಟಿಕ್ಟಾಕ್ ಬಹುಬೇಡಿಕೆಯ ಅಪ್ಲಿಕೇಷನ್ ಆಗಿದೆ. ವಿಶ್ವದಲ್ಲಿ ಬಿಲಿಯನ್ಗಿಂತಲೂ ಅಧಿಕ ಮಂದಿ ಇದನ್ನು ಬಳಸುತ್ತಿದ್ದಾರೆ. ಇದರಲ್ಲಿ ಹಂಚಿಕೊಳ್ಳುವ ವಿಡಿಯೋಗಳು ಬಹುತೇಕ ವೈರಲ್ ಆಗುತ್ತವೆ. ಹೀಗಾಗಿ ಅಧಿಕ ಮಂದಿ ಇದನ್ನು ಬಳಕೆ ಮಾಡುತ್ತಾರೆ.
ಈಗ ವಿಶ್ವದಲ್ಲಿ ಸುದ್ದಿ ಮಾಡುತ್ತಿರುವ ಕೊರೊನಾ ವೈರಸ್ ಬಗ್ಗೆ ತಯಾರಾದ ಟಿಕ್ಟಾಕ್ ವಿಡಿಯೋಗಳು ಅಧಿಕ ಸದ್ದು ಮಾಡುತ್ತಿವೆ.
ಕೊರೊನಾ ವೈರಸ್ ಅಲ್ಲದೆ ಭಾರತೀಯರ ಸಾಂಪ್ರದಾಯಿಕ ಹೋಳಿ ಹಬ್ಬದ ಆಚರಣೆ ಸೇರಿ ಹಲವು ವಿಷಯಗಳ ಟಿಕ್ಟಾಕ್ ವಿಡಿಯೋಗಳ ಝಲಕ್ ಹೀಗಿದೆ.
ಕೊರೊನಾ ವೈರಸ್ ದಾಳಿಗೆ ತತ್ತರಿಸಿರುವ ಚೀನಾದ ನಾಗರಿಕರು ಪ್ರಯಾಣದ ವೇಳೆಯಲ್ಲಿ ಮಾರಕ ವೈರಸ್ನಿಂದ ತಪ್ಪಿಸಿಕೊಳ್ಳಲು ಸಹ ಪ್ರಯಾಣಿಕರಿಂದ ಯಾವ ರೀತಿ ಅಂತರ ಕಾಯ್ದುಕೊಳ್ಳುತ್ತದೆ ಎಂಬುದನ್ನು ತಿಳಿಸುತ್ತದೆ. (ಏಜೆನ್ಸೀಸ್)