ಆಹಾರ ಸಾರ್ವಭೌಮತ್ವಕ್ಕಾಗಿ ಅಂತರರಾಷ್ಟ್ರೀಯ ಯೋಜನಾ ಸಮಿತಿ ಸಮಾವೇಶ ಬಗ್ಗೆ ಟಿಕಾಯತ್, ಡಿ.ಕೆ., ಸಮಾಲೋಚನೆ

dk
Published on

ಬೆಂಗಳೂರು:
ರಾಮನಗರ ಜಿಲ್ಲೆ ಚನ್ನಪಟ್ಟಣದ ಅರಳಾಳುಸಂದ್ರ ಸಮೀಪದ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಕನಸಿನ ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ ಆವರಣದಲ್ಲಿ ನಡೆಯಲಿರುವ ಆಹಾರ ಸಾರ್ವಭೌಮತ್ವಕ್ಕಾಗಿ ಅಂತರರಾಷ್ಟ್ರೀಯ ಯೋಜನಾ ಸಮಿತಿ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ಸಂಯುಕ್ತ ಕಿಸಾನ್ ಮೋರ್ಚಾ ನಾಯಕರಾದ ರಾಕೇಶ್ ಟಿಕಾಯತ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಶನಿವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ರೈತ ನಾಯಕರಾದ ಯುದ್ಧವೀರ ಸಿಂಗ್, ಕರ್ನಾಟಕ ರಾಜ್ಯ ರೈತ ಸಂಘದ ಹಸಿರುಸೇನೆ ಸಾಮೂಹಿಕ ನಾಯಕತ್ವದ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಕೆ.ಟಿ. ಗಂಗಾಧರ್, ಪ್ರೊ.ರವಿವರ್ಮ ಕುಮಾರ್, ಅನುಸೂಯಮ್ಮ, ಮನೋಹರ ಪಟೇಲ್, ಮಂಜುಕಿರಣ್, ವಿದ್ಯಾಸಾಗರ, ಕನ್ಹಯ್ಯನ್ ಮತ್ತು ಲಾವಿಯಾ ಕಂಪಾಸಿನಾ ಅಂತರರಾಷ್ಟ್ರೀಯ ಯೋಜನಾ ಸಮಿತಿಯ ಭಾರತೀಯ ಸೆಕ್ರೆಟರಿಯೇಟ್ ಪ್ರತಿನಿಧಿ ನವಾಜ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net