ಸಂರಕ್ಷಿತ ಅರಣ್ಯದಲ್ಲಿ ಸಾವಪ್ಪಿದ ಹುಲಿ! ಕಾರಣ ಏನು ಗೊತ್ತೆ ?

forest
Published on

ಚಿಕ್ಕಮಗಳೂರು : ಹುಲಿಗಳಿಗೆ ಮನುಷ್ಯರಿಂದ ಅಪಾಯವಾಗಬಾರದೆಂದು ಸಂರಕ್ಷಿತ ಅರಣ್ಯ ಪ್ರದೇಶಗಳನ್ನು ಸರ್ಕಾರ ಸೃಷ್ಟಿಸಿದೆ. ಆದರೆ ಎರಡು ಹುಲಿಗಳ ಪರಸ್ಪರ ಕಾದಾಟದಲ್ಲಿ ಒಂದು ಹುಲಿ ಸಾವಪ್ಪಿರುವ ದುರದೃಷ್ಟಕರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಭದ್ರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಜಿಲ್ಲೆಯ ತಣಿಗೆಬೈಲು ಅರಣ್ಯ ವಲಯದಲ್ಲಿರುವ ಕಮನದುರ್ಗ ಶಾಂತವೇರಿ ಸಮೀಪ ಇಂದು 4 ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿದೆ. ತಣಿಗೆಬೈಲು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎರಡು ಹುಲಿಗಳ ನಡುವೆ ನಡೆದ ಕಾದಾಟದಲ್ಲಿ ಒಂದು ಹುಲಿ ಸಾವಪ್ಪಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net