ಸೆಲ್ಫಿ ತೆಗೆದುಕೊಳ್ಳಲು ಹೋದ ಪ್ರವಾಸಿಗನ ಮೇಲೆ ಹುಲಿ ದಾಳಿ; ವಿಡಿಯೋ ವೈರಲ್| Viral vedeo

tiger
Published on: 

Viral vedeo| ಥೈಲ್ಯಾಂಡ್‌ನ ಫುಕೆಟ್ ಫೇಮಸ್ ಸ್ಪಾಟ್‌ ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳಾಗಿದೆ. ಇದು ಥೈಲ್ಯಾಂಡ್‌ನ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಅದರ ರೋಮಾಂಚಕ ವಾತಾವರಣ, ಪ್ರಾಚೀನ ದೇವಾಲಯಗಳು ಮತ್ತು ವಿಶಿಷ್ಟ ಸಾಂಸ್ಕೃತಿಕ ಅನುಭವಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಕಾಡುಪ್ರಾಣಿಗಳನ್ನು ಸಾಕುಪ್ರಾಣಿಗಳಂತೆ ಸಾಕಿ ಪ್ರವಾಸಿಗರಿಗೆ ಅವುಗಳ ಪ್ರದರ್ಶನ ಹಾಗೂ ಅವುಗಳ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ.

ಅಂದಹಾಗೆ ಇಲ್ಲಿರುವ ಟೈಗರ್ ಕಿಂಗ್‌ಡಮ್‌ಗೆ ಭಾರತೀಯ ಪ್ರವಾಸಿಗರೊಬ್ಬರು ಭೇಟಿ ನೀಡಿದ್ದು, ಈ ವೇಳೆ ಇಲ್ಲಿ ಹುಲಿಯೊಂದು ಆ ಪ್ರವಾಸಿಗನ ಮೇಲೆ ದಾಳಿ ನಡೆಸಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟ್ವಿಟ್ಟರ್‌ನಲ್ಲಿ ಈ ವೀಡಿಯೋವನ್ನು ಸಿದ್ಧಾರ್ಥ್ ಶುಕ್ಲಾ ಎಂಬುವವರು ಪೋಸ್ಟ್ ಮಾಡಿದ್ದು, ಥೈಲ್ಯಾಂಡ್‌ನಲ್ಲಿ ಭಾರತೀಯ ವ್ಯಕ್ತಿಯೊಬ್ಬರ ಮೇಲೆ ಹುಲಿ ದಾಳಿ ಮಾಡಿದೆ ಎಂದು ತೋರುತ್ತದೆ. ಹುಲಿಗಳನ್ನು ಸಾಕುಪ್ರಾಣಿಗಳಂತೆ ಸಾಕುವುದು ಮತ್ತು ಜನರು ಸೆಲ್ಫಿ ತೆಗೆದುಕೊಳ್ಳುವುದು, ಅವುಗಳಿಗೆ ಆಹಾರ ನೀಡುವುದು ಇತ್ಯಾದಿಗಳನ್ನು ಮಾಡುವ ಸ್ಥಳಗಳಲ್ಲಿ ಇದು ಒಂದು ಎಂದು ಅವರು ಬರೆದುಕೊಂಡಿದ್ದಾರೆ.

(ಏಜೆನ್ಸೀಸ್)

ಈ ವಿಡಿಯೋದಲ್ಲಿ ಸರಪಳಿಯಿಂದ ಬಂಧಿಸಲ್ಪಟ್ಟ ಹುಲಿ ಮತ್ತು ಹುಲಿಯ ತರಬೇತುದಾರನಂತೆ ಕಾಣುವ ವ್ಯಕ್ತಿ ಕೋಲು ಹಿಡಿದು ನಿಂತಿದ್ದಾನೆ. ಈ ನಡುವೆ ಪ್ರವಾಸಿಗ ಹುಲಿ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾದಾಗ, ಅನಿರೀಕ್ಷಿತವಾಗಿ ಹುಲಿ ಆತನ ಮೇಲೆ ದಾಳಿ ಮಾಡಿದೆ. ಈ ಸನ್ನಿವೇಶವು ಅವ್ಯವಸ್ಥೆಗೆ ತಿರುಗುತ್ತಿದ್ದಂತೆ ಕ್ಯಾಮೆರಾ ಹಿಂಸಾತ್ಮಕವಾಗಿ ಅಲುಗಾಡುತ್ತದೆ. ಹುಲಿ ಪ್ರವಾಸಿಗನ ಮೇಲೆ ದಾಳಿ ಮಾಡುತ್ತಿದ್ದಂತೆ ಅಲ್ಲಿದ್ದ ಇತರ ಪ್ರವಾಸಿಗರು ಜೋರಾಗಿ ಕಿರುಚಿಕೊಂಡಿದ್ದಾರೆ.