ಫೆ.9ರಂದು ತ್ಯಾಗರಾಜಸ್ವಾಮಿ ಆರಾಧನ ಮಹೋತ್ಸವ: ದಿನವಿಡೀ ಸಂಗೀತದ ವೈಭವ

Music _1
Published on

ಮಂಡ್ಯ: ಮಂಗಳವಾದ್ಯ ಕಲಾವಿದರ ಜಿಲ್ಲಾ ಸಂಘ ಹಾಗೂ ಜಿಲ್ಲಾ ಸವಿತಾ ಸಮಾಜ, ತ್ಯಾಗರಾಜಸ್ವಾಮಿ ಆರಾಧನ ಬಳಗದ ಸಹಯೋಗದಲ್ಲಿ ಫೆ.9ರಂದು ನಗರದ ಗುತ್ತಲು ಬಡಾವಣೆಯ ಅರ್ಕೇಶ್ವರಸ್ವಾಮಿ ದೇವಸ್ಥಾನದಲ್ಲಿ ತ್ಯಾಗರಾಜಸ್ವಾಮಿ 5ನೇ ವರ್ಷದ ಆರಾಧನ ಮಹೋತ್ಸವ ಆಯೋಜಿಸಲಾಗಿದೆ.

ಬೆಳಗ್ಗೆ 7ಗಂಟೆಗೆ ನಾದಸ್ವರ ವಾದನ, ಡೋಲು ವಾದನ, 7.30ಕ್ಕೆ ಸ್ಯಾಕ್ಸಫೋನ್ ವಾದನ, ಡೋಲು ವಾದನ, 8ಗಂಟೆಗೆ ಸ್ಯಾಕ್ಸಫೋನ್ ವಾದನ, ತಬಲ ವಾದನ, 8.30 ರಿಂದ ಮಧ್ಯಾಹ್ನ 1.30ಕ್ಕೆ ಸ್ಯಾಕ್ಸಫೋನ್ ವಾದನ, ಡೋಲು ವಾದನ, 2ಗಂಟೆಗೆ ನಾದಸ್ವರ ವಾದನ, ಡೋಲು ವಾದನ, 2.30ಕ್ಕೆ ಸ್ಯಾಕ್ಸಫೋನ್ ವಾದನ, ಡೋಲು ವಾದನ, 3ಗಂಟೆಗೆ ಸ್ಯಾಕ್ಸಫೋನ್ ವಾದನ, ಡೋಲು ವಾದನ, 3.30ಕ್ಕೆ ಹಾಡುಗಾರಿಕೆ, ಡೋಲು ವಾದನ, 4ಗಂಟೆಗೆ ನಾಡಸ್ವರ ವಾದನ, ಡೋಲು ವಾದನ, 4.30ಕ್ಕೆ ಸ್ಯಾಕ್ಸಫೋನ್ ವಾದನ, ಡೋಲು ವಾದನ, ಸಂಜೆ 5ಗಂಟೆಗೆ ಸ್ಯಾಕ್ಸಫೋನ್ ವಾದನ, ಡೋಲು ವಾದನ, 5.30ಕ್ಕೆ ನಾದಸ್ವರ ವಾದನ, ಡೋಲು ವಾದನ, 6.30ರಿಂದ 8.30ರವರೆಗೆ ನಾದಸ್ವರ ವಾದನ, ಡೋಲು ವಾದನ ನಡೆಯಲಿದೆ. ರಾತ್ರಿ 11ಗಂಟೆಗೆ ವಿಶೇಷ ನಾದಸ್ವರ ಕಛೇರಿ ಇರಲಿದೆ. ಮಧ್ಯಾಹ್ನ 1ಗಂಟೆಗೆ ಅನ್ನದಾಸೋಹವಿರಲಿದೆ. ಫೆ.8ರಂದು ಸಂಜೆ 6ಗಂಟೆಗೆ ಗುತ್ತಲು ರಾಜಬೀದಿಗಳಲ್ಲಿ ಅರ್ಕೇಶ್ವರಸ್ವಾಮಿ ಉತ್ಸವ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net