

ಬೆಂಗಳೂರು: ತಿಂಡಿ ತಿನ್ನಲು ಕೆಫೆಗೆ ಹೋಗಿದ್ದ ಮೂವರು ಯುವತಿಯರನ್ನು ದುಷ್ಕರ್ಮಿಗಳು ಹಿಂಬಾಲಿಸಿ ಕಿರುಕುಳ ನೀಡಲು ಯತ್ನಿಸಿದ್ದಾರೆ.
ಪುಂಡರ ಗುಂಪೊಂದು ಯುವತಿಯರನ್ನು ಹಿಂಬಾಲಿಸುತ್ತಿರುವ ವಿಡಿಯೋವನ್ನು ಯುವತಿಯೊಬ್ಬಳು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿ ಕ್ರಮಕ್ಕೆ ಒತ್ತಾಯಿಸಿದ್ದಾಳೆ.
ಜೆ.ಪಿ ನಗರ ಸಮೀಪದಲ್ಲಿರುವ ಕೆಫೆ ಬಳಿ ಮೂವರು ಯುವತಿಯರು ತಿಂಡಿ ತಿನ್ನಲು ಹೋಗಿದ್ದ ವೇಳೆ ಅಲ್ಲಿಯೇ ಇದ್ದ ಪುಂಡರು ಕಾರಿನಲ್ಲಿ ಇವರನ್ನು ಹಿಂಬಾಲಿಸಿದ್ದಾರೆ. ಈ ವೇಳೆಯಲ್ಲಿ ಈ ಮೂವರಲ್ಲಿ ಒಬ್ಬಾಕೆ ಇವರ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾಳೆ. ಈ ಕೆಟ್ಟ ಅನುಭವದಿಂದಾಗಿ ತಮಗೆ ಭೂಮಿ ನಡುಗಿದ, ಭಯನಕ ಅನುಭವವಾಗಿದೆ ಎಂದು ಶೀರ್ಷಿಕೆ ನೀಡಿ ಬರೆದುಕೊಳ್ಳಲಾಗಿದೆ.
ಆಟೋ ಬುಕ್ ಮಾಡಿಕೊಂಡು ತಮ್ಮ ಪಿಜಿಗೆ ತೆರಳುತ್ತಿದ್ದ ವೇಳೆಯಲ್ಲಿ ಮತ್ತೆ ಅದೇ ವ್ಯಕ್ತಿಗಳು ಕಾರಿನಲ್ಲಿ ತಮ್ಮನ್ನು ಹಿಂಬಾಲಿಸಿದ್ದಾರೆ. ಆಟೋ ಚಾಲಕನು ತಮಗೆ ಸಹಾಯ ಮಾಡಲು ಮುಂದಾಗಲಿಲ್ಲ ಎಂದಿದ್ದು, ಕೊನೆಗೆ ತಾವು ಸೇಫ್ ಆಗಿ ಪಿಜಿ ತಲುಪಿದೆವು ಎಂದು ಯುವತಿ ವಿಡಿಯೋದಲ್ಲಿ ಹೇಳಿದ್ದಾಳೆ.