ಯುವಕನಿಗೆ ಚಾಕುವಿನಿಂದ ಇರಿದ ಪುಂಡರು

Crime Logo
Published on

ಬೆಂಗಳೂರು: ನಗರದಲ್ಲಿ ಪುಂಡರ ಪುಂಡಾಟ ಮುಂದುವರಿದಿದ್ದು, ನಿಧಾನಕ್ಕೆ ಹೋಗು ಅಂದಿದ್ದಕ್ಕೆ ತರಕಾರಿ ಮಾರಾಟಗಾರನಿಗೆ ಚಾಕುವಿನಿಂದ ಇರಿದು ಅಟ್ಟಹಾಸ ಮೆರೆದಿದ್ದಾರೆ.

ಬಸವೇಶ್ವರ ನಗರದ ನಿವಾಸಿ ಚಿರಂಜೀವಿ (೩೨) ಚಾಕು ಇರಿತಕ್ಕೊಳಗಾದವರು.

ಏ.೧ ರಂದು ಕಮಲಾನಗರದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಚಿರಂಜೀವಿ ಅವರು ಸಮೀಪದಲ್ಲಿಯೇ ಇದ್ದ ಅತ್ತೆ ಮನೆಗೆ ಸ್ನೇಹಿತನ ಜತೆ ಬೈಕ್‌ನಲ್ಲಿ ಹೋಗಿ ವಾಪಸ್ಸಾಗುತ್ತಿದ್ದಾಗ ಬೆಳಗ್ಗೆ ೧೧ ಗಂಟೆಯ ವೇಳೆ ಕಮಲಾನಗರದ ಕೆರೆ ಅಂಗಳದ ವೀರಭದ್ರೇಶ್ವರ ಟಾಕಿಸ್ ಬಳಿ ಅಪರಿಚಿತರು, ಇವರಿಗೆ ಗುದ್ದುವಂತೆ ಜೋರಾಗಿ ಬೈಕ್‌ಗಳಲ್ಲಿ ಹೋಗಿದ್ದರು. ಅದಕ್ಕೆ ಚಿರಂಜೀವಿ ಅವರು ಹೇಯ್ ನಿಧಾನಕ್ಕೆ ನೋಡ್ಕೊಂಡ್ ಹೋಗಿ ಅಂತ ಹೇಳಿದ್ದರು. ಇಷ್ಟಕ್ಕೆ ಕೋಪಗೊಂಡ ಪುಂಡರು ಗುಂಪು ಬೈಕ್ ಯೂ ಟರ್ನ್ ಮಾಡಿಕೊಂಡು ಬಂದು ‘ನಮ್ಮ ಬಳಿಯಲ್ಲಿಯೇ ಎಗರಾಡುತ್ತೀಯಾ’ ಎಂದು ಅವರ ಬಳಿ ಇದ್ದ ಮಾರಕಾಸದಿಂದ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ಚಿರಂಜೀವಿ ಅವರು ಕುಸಿದು ಕೆಳಗೆ ಬಿದ್ದಿದ್ದರು. ಸ್ಥಳೀಯರು ಚಿರಂಜೀವಿ ಅವರ ಸಹೋದರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಸಹೋದರಿ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಬಸವೇಶ್ವರ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆ ಯತ್ನ ಪ್ರಕರಣ ದಾಖಲಿಸಬೇಕಿದ್ದ ಪೊಲೀಸರು ಕೇವಲ ಹಲ್ಲೆ ಪ್ರಕರಣ ದಾಖಲಿಸಿಕೊಂಡು ಸುಮ್ಮನಾಗಿದ್ದಾರೆ ಎಂದು ಚಿರಂಜೀವಿ ಕುಟುಂಬ ಸದಸ್ಯರು ಆರೋಪ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net