ಅಡ್ಡಗಟ್ಟಿ ಸುಲಿಗೆ ಮಾಡಲು ಪ್ರಯತ್ನಿಸಿದವರು ಕಾರನ್ನು 5 ಕೀಮೀ ಹಿಂಬಾಲಿಸಿದರು!

car rober
Published on

ಬೆಂಗಳೂರು: ಇಂದು ನಗರದಲ್ಲಿ ಸುಲಿಗೆಗೆ ಯತ್ನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅರೋಪಿಗಳನ್ನು ಬಂಧಿಸಲಾಗಿದೆ.

ಬೆಳ್ಳಂದೂರು ಪೊಲೀಸರು ಧನುಷ್ ಹಾಗೂ ರಕ್ಷಿತ್ ಎನ್ನುವ ಆರೋಪಿಗಳನ್ನು ಬಂಧಿಸಿದ್ದಾರೆ.

ಮೀನು ಮಾರಾಟದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು ಕೆಲಸ ಮುಗಿಸಿದ ಬಳಿಕ‌ ಕಾರನ್ನು ಅಡ್ಡ ಹಾಕಿ ಸುಲಿಗೆಗೆ ಯತ್ನ ಮಾಡಿದ್ದಾರೆ. ಈ ಘಟನೆ ಸರ್ಜಾಪುರ ರಸ್ತೆಯ ಸೋಫಾಸ್ ಬಳಿ ನಡೆದಿದೆ. ಕಾರನ್ನು ಅಡ್ಡಗಟ್ಟಲು ವಿಫಲರಾದ ಆರೋಪಿಗಳು, ಕಾರನ್ನು ಚಿಕ್ಕನಾಯಕನ ಹಳ್ಳಿಯಲ್ಲಿರುವ ಅವರ ಅಪಾರ್ಟ್ಮೆಂಟ್ ತನಕ ಹಿಂಬಾಲಿಸಿದ್ದಾರೆ ಎನ್ನಲಾಗಿದೆ.

ಇದಾದ ಮೇಲೆ ಕಾರಿನ ಚಾಲಕ ವಿಡಿಯೋ ಸಮೇತ ಟ್ವಿಟರ್ ನಲ್ಲಿ ಪೊಲೀಸರನ್ನು ಟ್ಯಾಗ್ ಮಾಡಿ ದೂರು ನೀಡಿದ್ದಾನೆ. ಈ ಬಗ್ಗೆ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಸ್ ದಾಖಲಾದ ಬಳಿಕ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net