'ಕಮಾಲ್' ಮಾಡದ 'ಕಮಲ್​' ಸಿನಿಮಾ! 8 ವಾರಕ್ಕೂ ಮೊದಲೇ 'ಥಗ್​ ಲೈಫ್​' ಒಟಿಟಿಗೆ, ಇದು ಫ್ಲಾಪ್ ಕಥೆ | Thug Life

ವಿಜಯವಾಣಿ (72)
Published on

Thug Life: 'ಕನ್ನಡ ತಮಿಳಿನಿಂದ ಹುಟ್ಟಿದ್ದು' ಎಂದು ಭಾಷೆ ಕುರಿತು ತಮಿಳು ನಟ ಕಮಲ್ ಹಾಸನ್ ನೀಡಿದ ವಿವಾದಾತ್ಮಕ ಹೇಳಿಕೆ ಇದೀಗ ಅವರ ಚಿತ್ರಕ್ಕೆ ಭಾರೀ ಮುಖಭಂಗವನ್ನೇ ಉಂಟುಮಾಡಿದೆ. ಕನ್ನಡಿಗರಲ್ಲಿ ಕ್ಷಮೆ ಕೇಳುವುದಿಲ್ಲ ಎಂಬ ಸೊಕ್ಕಿನ ಮಾತುಗಳನ್ನಾಡಿದ ಕಮಲ್​ಗೆ ಕರ್ನಾಟಕ ಹೈಕೋರ್ಟ್​ ಕೂಡ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಛೀಮಾರಿ ಹಾಕಿತು. ತಮ್ಮ ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಕೋರಿ ಕೋರ್ಟ್​ಗೆ ಕಮಲ್ ಸಲ್ಲಿಸಿದ್ದ ಅರ್ಜಿ ಜೂ.10ಕ್ಕೆ ಮುಂದೂಡಿಕೆ ಆಯಿತು. ಈ ಮೂಲಕ ನಟನ ಸಿನಿಮಾ ಕರ್ನಾಟದಲ್ಲಿ ಜೂ.5ಕ್ಕೆ ರಿಲೀಸ್ ಆಗಲಿಲ್ಲ. ಇದು ಅವರ ಚಿತ್ರಕ್ಕೆ ದೊಡ್ಡ ಹೊಡೆತ ನೀಡಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಥಗ್​ ಲೈಫ್​​ಗೆ ಲೈಫ್​

ಕರ್ನಾಟಕ ಹೊರತುಪಡಿಸಿ ಉಳಿದೆಲ್ಲ ಕಡೆ ಬಿಡುಗಡೆಗೊಂಡ ಕಮಲ್ ಹಾಸನ್ ಅಭಿನಯದ 'ಥಗ್​ ಲೈಫ್​'ಗೆ ಚಿತ್ರರಸಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಲಿಲ್ಲ. ಮಿಶ್ರ ಅಭಿಪ್ರಾಯಗಳನ್ನು ಪಡೆ ಕಮಲ್ ಚಿತ್ರ, ಬಾಕ್ಸ್​ ಆಫೀಸ್​ನಲ್ಲಿ ಕಮಾಲ್ ಮಾಡಲಿಲ್ಲ. ಇದು ಮಣಿರತ್ನಂ ನಿರ್ದೇಶನದ ಸಿನಿಮಾಗೆ ಭಾರೀ ಹೊಡೆತ ನೀಡಿದೆ. ಜೊತೆಗೆ ದೊಡ್ಡ ಸೋಲನ್ನು ಉಣಿಸಿದೆ. ಈ ಸೋಲಿನ ಬೆನ್ನಲ್ಲೇ ಇದೀಗ ಚಿತ್ರತಂಡ ಸಿನಿಮಾವನ್ನು ಒಟಿಟಿಗೆ ಕೊಡಲು ಮುಂದಾಗಿದೆ.

ತೆರೆಕಂಡ ಮೊದಲ ದಿನದಿಂದಲೇ ಸಿನಿಮಾವನ್ನು ತಿರಸ್ಕರಿಸಿದ ಸಿನಿಪ್ರಿಯರು, ಕಮಲ್​ ಚಿತ್ರಕ್ಕೆ ಮನ್ನಣೆ ನೀಡಲಿಲ್ಲ. ವಿಮರ್ಶೆ ಮತ್ತು ಬಾಕ್ಸ್ ಆಫೀಸ್​ನಲ್ಲಿ ತೀವ್ರ ಮುಖಭಂಗ ಅನುಭವಿಸಿದ ಥಗ್​ ಲೈಫ್​ಗೆ ಲೈಫ್​ ಕೊಡಲು ಮುಂದಾಗಿರುವ ಚಿತ್ರತಂಡ, ಹೆಸರಾಂತ ಒಟಿಟಿ ಫ್ಲಾಟ್​ಫಾರ್ಮ್ ಆದ ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆಗೊಳಿಸಲು ಚಿಂತನೆ ನಡೆಸಿದೆ ಎಂದು ಸಿನಿ ಮೂಲಗಳು ತಿಳಿಸಿವೆ.

ನೆಟ್​ಫ್ಲಿಕ್ಸ್​ ಸಂಸ್ಥೆಯೊಂದಿಗೆ ಹಣಕಾಸು ವಿಚಾರವನ್ನು ಚರ್ಚಿಸಿರುವ ಚಿತ್ರ ತಯಾರಕರು, ನಿರೀಕ್ಷಿತ ಸಮಯಕ್ಕೂ ಮುನ್ನವೇ ಸಿನಿಮಾವನ್ನು ಒಟಿಟಿಗೆ ತರಲು ಎದುರುನೋಡುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನೆಟ್​ಫ್ಲಿಕ್ಸ್​ ಇನ್ನೂ ರಿಲೀಸ್​ಗೆ ಒಪ್ಪಿಗೆ ಸೂಚಿಸಿಲ್ಲ. ಬದಲಿಗೆ ಮಾತುಕತೆ ಹಂತದಲ್ಲಿದೆ ಎನ್ನಲಾಗಿದೆ. ಚಿತ್ರಮಂದಿರದಲ್ಲಿ ಸೋತ ಚಿತ್ರ ಒಟಿಟಿಯಲ್ಲಿ ಆದರೂ ಮರುಜೀವ ಪಡೆಯಲಿ ಎಂಬುದು ಚಿತ್ರತಂಡದ ಮನದಾಳ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net